Sunday, December 3, 2023

Latest Posts

ಕೆನಡಾದ ಖಲಿಸ್ತಾನಿ ಉಗ್ರರಿಗೆ ಶಾಕ್: ಗುರುಪತ್ವಂತ್ ಪಂಜಾಬ್‌ನ ಆಸ್ತಿ ಮುಟ್ಟುಗೋಲು ಹಾಕಿದ NIA

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತ ಹಾಗೂ ಕೆನಡಾ ನಡುವಿನ ಸಮರದ ನಡುವೆ ಭಾರತ ಖಲಿಸ್ತಾನಿ ಉಗ್ರರ ಹೆಡೆಮುರಿ ಕಟ್ಟಲು ಕಾರ್ಯಾಚರಣೆ ಆರಂಭಿಸಿದೆ.
ಕೆನಡಾದಲ್ಲಿ ಕುಳಿತು ಭಾರತಕ್ಕೆ ಪದೇ ಪದೇ ಎಚ್ಚರಿಕೆ ನೀಡುತ್ತಿರುವ ಹಾಗೂ ಪಾಕಿಸ್ತಾನ ಸೇರಿದಂತೆ ಹಲವು ಉಗ್ರ ಸಂಘಟನೆಗಳಿಂದ ಆರ್ಥಿಕ ನೆರವು ಪಡೆಯುತ್ತಿರುವ ಖಲಿಸ್ತಾನ್ ಉಗ್ರ ಬೆಂಬಲಿತ ಸಿಖ್ ಫಾರ್ ಜಸ್ಟೀಸ್ ಸಂಘಟನೆ ಗುರುಪತ್ವಂತ್ ಪನ್ನುನ ಭಾರತದ ಆಸ್ತಿಯನ್ನು ಎನ್ಐಎ ಮುಟ್ಟುಗೋಲು ಹಾಕಿದೆ.

ಚಂಢಿಘಡಜಲ್ಲಿರುವ ಕೃಷಿ ಭೂಮಿ, ಅಮೃತಸರದಲ್ಲಿರುವ ಪನ್ನುನ್ ಮನೆಯನ್ನು ಎನ್ಐಎ ಮುಟ್ಟುಗೋಲು ಹಾಕಿಕೊಂಡಿದೆ.

ಇಂದು ದಿಢೀರ್ ಎನ್ಐಎ ಅಧಿಕಾರಿಗಳು ಪನ್ನುನ್ ಪಂಜಾಬ್‌ನ ನಿವಾಸ ಹಾಗೂ ಕೃಷಿ ಭೂಮಿ ಮೇಲೆ ದಾಳಿ ಮಾಡಿದ್ದಾರೆ. ಬಳಿಕ ಉಗ್ರಚಟುವಟಿಕೆ, ಭಾರತ ವಿರೋಧಿ ಚಟುವಟಿಕೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಎನ್ಐಎ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿರುವ ಗುರುಪತ್ವಂತ್ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಎನ್ಐಎ ಅಧಿಕಾರಿಗಳು ಬೋರ್ಡ್ ಹಾಕಿದ್ದಾರೆ.

ಕೆನಾಡ ಪ್ರಧಾನಿ ಜಸ್ಟಿನ್ ಟ್ರುಡೋ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಸಾವಿನ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪ ಕೋಲಾಹಲ ಸೃಷ್ಟಿಸಿದೆ. ಈ ಹೇಳಿಕೆ ಬೆನ್ನಲ್ಲೇ ಭಾರತ ಆರೋಪ ಅಲ್ಲಗೆಳೆದು ಕೆನಾಡ ರಾಯಭಾರಿ ಅಧಿಕಾರಿಗಳನ್ನು ಕರೆಸಿ ಛೀಮಾರಿ ಹಾಕಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!