Friday, December 8, 2023

Latest Posts

ಕಾನೂನುಗಳನ್ನು ಸರಳ ರೀತಿಯಲ್ಲಿ ರಚಿಸಲು ಪ್ರಾಮಾಣಿಕ ಪ್ರಯತ್ನ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಮ್ಮ ಸರ್ಕಾರವು ಕಾನೂನುಗಳನ್ನು ಸರಳ ರೀತಿಯಲ್ಲಿ ಮತ್ತು ಗರಿಷ್ಠ ಪ್ರಮಾಣದಲ್ಲಿ ಭಾರತೀಯ ಭಾಷೆಗಳಲ್ಲಿ ರಚಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದರು.

ಹಲಿಯ ವಿಜ್ಞಾನ ಭವನದಲ್ಲಿ ‘ಅಂತರರಾಷ್ಟ್ರೀಯ ವಕೀಲರ ಸಮ್ಮೇಳನ 2023’ (International Lawyers’ Conference 2023) ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಸ್ವಾತಂತ್ರ್ಯ ಚಳವಳಿ ಮತ್ತು ಅದರ ಮುಂದುವರಿದ ಪ್ರಗತಿಗೆ ಗಣನೀಯ ಕೊಡುಗೆ ನೀಡಿದ ಕಾನೂನು ತಜ್ಞರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಕೃತಜ್ಞತೆ ಸಲ್ಲಿಸಿದ್ದಾರೆ.

ಬಳಿಕ ಮಾತು ಮುಂದುವರಿಸಿ, ಭಾರತ ಸರ್ಕಾರದಲ್ಲಿ ನಾವು ಕಾನೂನನ್ನು ಎರಡು ರೀತಿಯಲ್ಲಿ ರಚಿಸಬೇಕೆಂದು ಯೋಚಿಸುತ್ತಿದ್ದೇವೆ. ಒಂದು ಕರಡು ನೀವು ಬಳಸುತ್ತಿರುವ ಭಾಷೆಯಲ್ಲಿರುತ್ತದೆ. ಎರಡನೆಯದು ಕರಡು ದೇಶದ ಸಾಮಾನ್ಯ ಜನರಿಗೆ ಅರ್ಥವಾಗುವ ಭಾಷೆಯಲ್ಲಿರುತ್ತದೆ.ಏಕೆಂದರೆ ಅದು ಅವರಿಗೂ ಅರ್ಥವಾಗಬೇಕು ಎಂದು ಹೇಳಿದರು.

ಕಾನೂನು ತಜ್ಞರು ಶ್ಲಾಘಿಸಿದ ಅವರು, ಭಾರತವು 75 ವರ್ಷಗಳ ಸ್ವಾತಂತ್ರ್ಯವನ್ನು ಪೂರೈಸಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟದಲ್ಲಿ, ಕಾನೂನು ತಜ್ಞರು ಮಹತ್ತರ ಪಾತ್ರವಹಿಸಿದ್ದಾರೆ. ಅನೇಕ ವಕೀಲರು ತಮ್ಮ ವೃತ್ತಿ ತೊರೆದು ಸ್ವಾತಂತ್ರ್ಯ ಚಳವಳಿಯಲ್ಲಿ ಸೇರಿದ್ದಾರೆ. ಯಾವುದೇ ದೇಶದ ನಿರ್ಮಾಣದಲ್ಲಿ ಕಾನೂನು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ವರ್ಷಗಳಿಂದ, ನ್ಯಾಯಾಂಗ ಮತ್ತು ವಕೀಲರು ಭಾರತದ ಕಾನೂನು ಮತ್ತು ಸುವ್ಯವಸ್ಥೆಯ ಪೋಷಕರಾಗಿದ್ದಾರೆ ಎಂದು ಮೋದಿ ಹೇಳಿದರು.

ಮಹಾತ್ಮಾ ಗಾಂಧಿ, ಬಿ ಆರ್ ಅಂಬೇಡ್ಕರ್, ಜವಾಹರಲಾಲ್ ನೆಹರು ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ವಕೀಲರಾಗಿದ್ದರು ಎಂದು ಸ್ಮರಿಸಿದರು.

ಮಹಿಳಾ ಮೀಸಲಾತಿ ಮಸೂದೆಯ ಅಂಗೀಕಾರ ಮತ್ತು ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಮಿಷನ್‌ನ ಯಶಸ್ವಿ ಲ್ಯಾಂಡಿಂಗ್ ಸೇರಿದಂತೆ ಭಾರತದಲ್ಲಿನ ಹಲವಾರು ಐತಿಹಾಸಿಕ ಬೆಳವಣಿಗೆಗಳೊಂದಿಗೆ ಅಂತರರಾಷ್ಟ್ರೀಯ ವಕೀಲರ ಸಮ್ಮೇಳನವು ನಡೆಯುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!