Friday, October 7, 2022

Latest Posts

ಗುಜರಾತ್​ -ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್​ಗೆ ಶಾಕ್​: ಬಿಜೆಪಿ ಸೇರಿದ ಪ್ರಮುಖ ನಾಯಕರು

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಗುಜರಾತ್​ ಮತ್ತು ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್​ಗೆ ಶಾಕ್​ ಆಗಿದ್ದು, ಉಭಯ ರಾಜ್ಯಗಳಲ್ಲೂ ಪಕ್ಷದ ನಾಲ್ವರು ಪ್ರಮುಖ ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್​ ಕಾರ್ಯಾಧ್ಯಕ್ಷ ಪವನ್​ ಕುಮಾರ್​ ಕಾಜಲ್​ ಹಾಗೂ ಉಪಾಧ್ಯಕ್ಷ ಲಖ್ವಿಂದರ್​ ಸಿಂಗ್ ರಾಣಾ ಕೇಸರಿ ಪಕ್ಷದ ಬಾವುಟ ಹಿಡಿದಿದ್ದಾರೆ. ಈ ಇಬ್ಬರೂ ಕೂಡ ಬಿಜೆಪಿ ಕಚೇರಿಯಲ್ಲಿ ಮುಖ್ಯಮಂತ್ರಿ ಜೈರಾಮ್​ ಠಾಕೂರ್​, ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅರುಣ್​ ಸಿಂಗ್​ ಸಮ್ಮುಖದಲ್ಲಿ ಕೇಸರಿ ಬಾವುಟ ಹಿಡಿದರು. ಪವನ್​ ಮತ್ತು ಲಖ್ವಿಂದರ್​ ಇಬ್ಬರೂ ಕಾಂಗ್ರೆಸ್​ ಪಕ್ಷದಿಂದ ಎರಡು ಬಾರಿ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದರು.

ಗುಜರಾತ್​ನಲ್ಲೂ ಕಾಂಗ್ರೆಸ್ ತೊರೆದ ಇಬ್ಬರು:
ಗುಜರಾತ್​ನಲ್ಲೂ ಇಬ್ಬರು ಹಿರಿಯ ನಾಯಕರು ಕಾಂಗ್ರೆಸ್ ತೊರೆದು, ಕಮಲ ಪಾಳಯಕ್ಕೆ ಸೇರ್ಪಡೆಯಾಗಿದ್ದಾರೆ. ನರೇಶ್​ ರಾವಲ್​ ಮತ್ತು ರಾಜು ಪರ್ಮಾರ್​ ಅವರು ಗುಜರಾತ್​ ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್​.ಪಾಟೀಲ್​ ನೇತೃತ್ವದಲ್ಲಿ ಸೇರ್ಪಡೆಗೊಂಡರು.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!