Friday, October 7, 2022

Latest Posts

SHOCKING | ಶೂಟಿಂಗ್‌ ವೇಳೆ ದಕ್ಷಿಣ ಭಾರತ ಖ್ಯಾತ ನಟನಿಗೆ ಗಂಭೀರ ಗಾಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಹೈದರಾಬಾದ್ ಪೊಲೀಸ್ ಅಕಾಡೆಮಿಯಲ್ಲಿ ಶೂಟಿಂಗ್ ನಡೆಯುತ್ತಿದ್ದಾಗ ಜನಪ್ರಿಯ ಚಲನಚಿತ್ರ ನಟ ನಾಸರ್ʼಗೆ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಅಸ್ಪತ್ರೆಗೆ ದಾಖಲಿಸಲಾಗಿದೆ.

ತಮಿಳು ಚಿತ್ರದ ಚಿತ್ರೀಕರಣವು ಹೈದರಾಬಾದ್‌ನಲ್ಲಿ ನಡೆಯುತ್ತಿದ್ದು, ನಟರಾದ ಸುಹಾಸಿನಿ, ಮೆಹ್ರೀನ್ ಮತ್ತು ಶಿಯಾಜಿ ಶಿಂಧೆ ಅವರೊಂದಿಗೆ ಚಿತ್ರೀಕರಣ ನಡೆಯುತ್ತಿದ್ದ ವೇಳೆ ನಟ ನಾಸಿರ್ ಗಾಯಗೊಂಡಿದ್ದಾರೆ.
ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.

ನಾಸರ್ ಮೆಟ್ಟಿಲುಗಳನ್ನ ಇಳಿಯುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎನ್ನಲಾಗ್ತಿದ್ದು, ಅವರ ಎಡಗಣ್ಣಿನ ಕೆಳಗೆ ಗಾಯವಾಗಿದ್ದು, ಇದು ರಕ್ತಸ್ರಾವಕ್ಕೆ ಕಾರಣವಾಯಿತು ಎಂದು ವೈದ್ಯರು ತಿಳಿಸಿದ್ದಾರೆ.

ದಕ್ಷಿಣದಲ್ಲಿ ವಿಶಿಷ್ಟ ನಟ ಎಂದೇ ಖ್ಯಾತರಾದ ನಟ ನಾಸರ್, ಸ್ಟಾರ್ ಹೀರೋಗಳ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನ ನಿರ್ವಹಿಸಿದ್ದಾರೆ. ಬಾಹುಬಲಿಯಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!