Wednesday, March 29, 2023

Latest Posts

ಕಾಂಗ್ರೆಸ್‌ಗೆ ಶಾಕ್: ಅಧಿಕೃತ ವೆಬ್‌ಸೈಟ್ ಹ್ಯಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚುನಾವಣೆನತ್ತ ಕಾಂಗ್ರೆಸ್ ತನ್ನ ಗಮನ ಹರಿಸಿದ್ದು, ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರಲು ತಯಾರಿ ನಡೆಸುತ್ತಿದೆ. ಇದರ ನಡುವೆ ಕಾಂಗ್ರೆಸ್ ಅಧಿಕೃತ ವೆಬ್‌ಸೈಟ್ ಹ್ಯಾಕ್ ಮಾಡಲಾಗಿದೆ.
ಕಾಂಗ್ರೆಸ್ ಅಧಿಕೃತ ವೆಬ್‌ಸೈಟ್‌ನಲ್ಲಿ ಅನಧಿಕೃತ ಪೋಸ್ಟ್‌ಗಳು ಪತ್ತೆಯಾಗಿದೆ. ಇದರ ಬೆನ್ನಲ್ಲೇ ವೆಬ್‌ಸೈಟ್‌ನ್ನು ಸಸ್ಪೆಂಡ್ ಮಾಡಲಾಗಿದೆ.

ಕಾಂಗ್ರೆಸ್ ಅಧಿೃಕಯ ವೆಬ್‌ಸೈಟ್ ಹ್ಯಾಕ್ ಆಗಿರುವ ಕಾರಣ ತಾತ್ಕಾಲಿಕವಾಗಿ ಸಸ್ಪೆಂಡ್ ಮಾಡಲಾಗಿದೆ. ಸದ್ಯ ಕಾಂಗ್ರೆಸ್ ಅಧಿಕೃತ ವೆಬ್‌ಸೈಟ್ ಲಭ್ಯವಿಲ್ಲ. ಕಾಂಗ್ರೆಸ್ ಅಧಿಕೃತ ವೆಬ್‌ಸೈಟ್ ಲಿಂಕ್ ಕ್ಲಿಕ್ ಮಾಡಿದರೆ ಈ ಖಾತೆಯನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಸಂದೇಶ ಕಾಣಿಸುತ್ತಿದೆ. ಇದೇ ಸಮಯದಲ್ಲಿ ಕೆಪಿಸಿಸಿ.ಇನ್ ವೆಬ್‌ಸೈಟ್ ಒಪನ್ ಮಾಡಲಾಗಿದೆ. ಮೇಲ್ನೋಟಕ್ಕೆ ಇದು ಕಾಂಗ್ರೆಸ್ ಅಧಿಕೃತ ವೆಬ್ ಸೈಟ್ ರೀತಿಯಲ್ಲಿ ಕಾಣಿಸುತ್ತಿದೆ. ಯೂಆರ್‌ಎಲ್ ಕೂಡ ಕೆಪಿಸಿಸಿ.ಇನ್ ಎಂದಿದೆ.

ಮುಖಪುಟದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಕೆಜೆ ಜಾರ್ಜ್ ಫೋಟೋ ಬಳಸಲಾಗಿದೆ. ಈ ಫೋಟೋಗಳ ಮೇಲೆ ಕಮ್ಯೂನಲ್ , ಕ್ರಿಮಿನಲ್ ಹಾಗೂ ಕರಪ್ಟ್ ಎಂದು ಉಲ್ಲೇಖಿಸಲಾಗಿದೆ.
ಇನ್ನು ಇತರ ಪುಟಗಳಲ್ಲಿ ಕಾಂಗ್ರೆಸ್ ಮೇಲಿನ ಆರೋಪಗಳು, ಕಾಂಗ್ರೆಸ್ ಆಡಳಿತದಲ್ಲಿ ನಡೆದ ಭ್ರಷ್ಟಾಚಾರ, ಕೋಮುಗಲಭೆ ಸೇರಿದಂತೆ ಹಲವುವಿವಾದಾತ್ಮಕ ಮಾಹಿತಿಗಳನ್ನು ಹಾಕಲಾಗಿದೆ. ಇನ್ನು ಕಾಂಗ್ರೆಸ್ ಅವಧಿಯಲ್ಲಿ ಆಗಿರುವ ಜನಪ್ರಿಯ ಹಗರಣಗಳು, ಪ್ರಮುಖ ಅಪರಾಧಗಳು, ಕೋಮುಗೃಲಭೆಗಳ ಮಾಹಿತಿಗಳನ್ನು ಹಾಕಲಾಗಿದೆ. ಇನ್ನು ಕೇಂದ್ರದಲ್ಲಿ 2004ರಿಂದ 2014ರ ವರೆಗೆ ಯುಪಿಎ ಅವಧಿಯಲ್ಲಿ ಆಗಿರುವ ಹಗರಣ, ಕೋಮುಗಲಭೆ ಕುರಿತ ಮಾಹಿತಿಗಳನ್ನು ಹಾಕಲಾಗಿದೆ.

ಕಾಂಗ್ರೆಸ್ ಅಂಗ ಪಕ್ಷ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ತುಕಡೇ ತುಕಡೇ ಗ್ಯಾಂಗ್, ಅರ್ಬನ್ ನಕ್ಸಲರು, ದೇಶ ವಿರೋಧಿಗಳು ಎಂದು ಹಲವು ಮಾಹಿತಿಗಳನ್ನು ಕೆಪಿಸಿಸಿ. ಇನ್ ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!