ಉತ್ತರ ಪ್ರದೇಶ ಎಂಎಲ್‌ಸಿ ಚುನಾವಣೆ: ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶ ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆಯಲ್ಲಿ ಐದು ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ.
ಪ್ರಮುಖ ಪ್ರತಿಪಕ್ಷ ಸಮಾಜವಾದಿ ಪಕ್ಷ ಈ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನ ಪಡೆಯಲು ವಿಫಲವಾಗಿದೆ.
ಜನವರಿ 30 ರಂದು ಮೂರು ಪದವೀಧರ ಕ್ಷೇತ್ರಕ್ಕೆ ಮತ್ತು ಎರಡು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆದಿತ್ತು. ಪದವೀಧರ ಕ್ಷೇತ್ರ ಬಿಜೆಪಿಯ ಜೈಪಾಲ್ ಸಿಂಗ್(ಬರೇಲಿ-ಮೊರಾದಾಬಾದ್ ವಿಭಾಗ), ಅರುಣ್ ಪಾಠಕ್(ಉನ್ನಾವ್-ಕಾನ್ಪುರ್ ವಿಭಾಗ), ಮತ್ತು ದೇವೇಂದ್ರ ಪಾಠಕ್(ಗೋರಖ್ಪುರ-ಫೈಜಾಬಾದ್ ವಿಭಾಗ) ಗೆಲುವು ಸಾಧಿಸಿದ್ದಾರೆ.
ಆಡಳಿತ ಪಕ್ಷದ ಬಾಬುಲಾಲ್ ತಿವಾರಿ ಅವರು ಝಾನ್ಸಿ-ಅಲಹಾಬಾದ್ ವಿಭಾಗದ ಶಿಕ್ಷಕರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ ಕಾನ್ಪುರ ವಿಭಾಗದ ಶಿಕ್ಷಕರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ರಾಜ್ ಬಹದ್ದೂರ್ ಚಂದೇಲ್ ಅವರ ವಿರುದ್ಧ ಬಿಜೆಪಿ ಸೋಲು ಅನುಭವಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!