September 22, 2026
Tuesday, September 22, 2026
spot_img

ಗ್ರಾಹಕರಿಗೆ ಶಾಕ್: ನಾಳೆಯಿಂದ ಈ ಹಾಲಿನ ದರ ಲೀಟರ್​​ಗೆ 2 ರೂ. ಏರಿಕೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೇಶದ ಪ್ರಮುಖ ಹಾಲು ಮಾರಾಟ ಸಂಸ್ಥೆ, ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟವು ಅಮುಲ್ ಬ್ರಾಂಡ್ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂ.ಗಳಷ್ಟು ಹೆಚ್ಚಿಸಿದ್ದು, ಈ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ.

ಪರಿಷ್ಕೃತ ಬೆಲೆಗಳು ಮೇ 14 ರಿಂದ ಜಾರಿಗೆ ಬರಲಿದೆ. ದೇಶಾದ್ಯಂತ ಅಮುಲ್ ಹಾಲು ಪ್ರತಿ ಲೀಟರ್‌ಗೆ 2 ರೂ. ಹೆಚ್ಚಳವಾಗಲಿದೆ.

ಹಾಲಿನ ಉತ್ಪಾದನೆ ಹಾಗೂ ಇತರೆ ಕೆಲಸಗಲ್ಲಿನ ವೆಚ್ಚ ಹೆಚ್ಚಳವಾಗಿದ್ದು, ಈ ಹಿನ್ನೆಲೆ ಬೆಲೆ ಏರಿಕೆ ಅನಿವಾರ್ಯವಾಗಿದೆ. ಜಾನುವಾರು ಮೇವು, ಹಾಲಿನ ಪ್ಯಾಕೇಜಿಂಗ್ ಫಿಲ್ಮ್ ಮತ್ತು ಇಂಧನದ ಖರ್ಚು ಅಧಿಕವಾಗಿರುವ ಕಾರಣ ಬೆಲೆ ಹೆಚ್ಚಿಸಲಾಗಿದೆ ಎಂದು GCMMF ತಿಳಿಸಿದೆ.

ಅಮುಲ್ ಕಂಪನಿಯ ಅಮುಲ್ ಗೋಲ್ಡ್, ಅಮುಲ್ ತಾಜಾ, ಅಮುಲ್ ಹಸು ಹಾಲು, ಅಮುಲ್ ಎಮ್ಮೆ ಹಾಲು, ಅಮುಲ್ ಸ್ಲಿಮ್ ಆ್ಯಂಡ್ ಟ್ರಿಮ್, ಅಮುಲ್ ಸ್ಟ್ಯಾಂಡರ್ಡ್ ಮಿಲ್ಕ್, ಅಮುಲ್ ಟಿ-ಸ್ಪೆಷಲ್ ಗಳ ಬೆಲೆ ಏರಿಕೆ ಆಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !