ಗ್ರಾಹಕರಿಗೆ ಶಾಕ್: ನಂದಿನಿ ಹಾಲು- ಮೊಸರಿನ ದರದಲ್ಲಿ ಮತ್ತೆ ಏರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಇಂದು ಮಧ್ಯರಾತ್ರಿಯಿಂದಲೇ ಪ್ರತಿ ಲೀಟರ್‌ ನಂದಿನಿಹಾಲು ಮತ್ತು ಮೊಸರಿನ ದರ 3 ರೂ. ಏರಿಕೆಯಾಗಲಿದೆ

ಈ ಕುರಿತು ಅದಿಕೃತ ಮಾಹಿತಿ ನೀಡಿದ ಕರ್ನಾಟಕ ಹಾಲು ಒಕ್ಕೂಟ (Karnataka Milk Federation), ರೈತರಿಂದ ಪ್ರತಿ ಲೀಟರ್ ಹಾಲನ್ನು ಕೆಎಂಎಫ್‌ ಸರಾಸರಿ 29 ರೂ.ಗೆ ಖರೀದಿ ಮಾಡುತ್ತಿತ್ತು. ಅಷ್ಟೇ ಅಲ್ಲದೇ ಸರ್ಕಾರದಿಂದ‌ ಪ್ರತಿ ಲೀಟರ್ ಗೆ 5 ರೂ ಸಹಾಯಧನ ಕೂಡ ರೈತರಿಗೆ ನೀಡಲಾಗುತ್ತಿದೆ. ಈಗ ಏರಿಕೆ ಮಾಡಿದ ಹಣವನ್ನು ರೈತರಿಗೆ ನೀಡುವ ಪ್ಲಾನ್ ಮಾಡಲಾಗಿದೆ.

ಹಾಲಿನ ದರ ಪರಿಷ್ಕರಿಷ್ಕರಿಸುವಂತೆ ರಾಜ್ಯದ 16ಹಾಲು ಒಕ್ಕೂಟಗಳು ಕೆಎಂಫ್ಗೆ ಮನವಿ ಸಲ್ಲಿಸಿದ್ದವು. ದರ ಏರಿಕೆಯ ಹಣವನ್ನು ರೈತರಿಗೆ ನೀಡುವುದಾಗಿ ಹೇಳಿದ್ದವು. ಇದರಿಂದ ಕೆಎಂಎಫ್ ಮತ್ತು ಸರ್ಕಾರದ ಮೇಲೆ ಒತ್ತಡ ಬಿದ್ದಿತ್ತು. ಈ ಸಂಬಂಧ ವಿಧಾನಪರಿಷತ್ನಲ್ಲಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಮುಖ್ಯಮಂತ್ರಿಗಳ ಗಮನಕ್ಕೆ ತಂದು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದಿದ್ದರು.

ಹೀಗಿದೆ ನಂದಿನ ಹಾಲು, ಮೊಸರಿನ ಪರಿಷ್ಕೃತ ನೂತನ ದರಪಟ್ಟಿ

ಟೋನ್ಡ್ ಹಾಲು 37 ರೂ ರಿಂದ 40 ರೂಗೆ ಏರಿಕೆ
ಹೋಮೋಜಿನೈಸ್ಡ್ ಹಾಲು 38 ರೂ ರಿಂದ 41 ರೂಗೆ ಏರಿಕೆ
ಹೊಮೊಜಿನೈಸ್ಡ್ ಹಸುವಿನ ಹಾಲು 42 ರೂ ರಿಂದ 45 ರೂಗೆ ಏರಿಕೆ
ಸ್ಪೆಷಲ್ ಹಾಲು 43 ರೂ ರಿಂದ 46 ರೂಗೆ ಏರಿಕೆ
ಶುಭಂ ಹಾಲು 43 ರೂ ರಿಂದ 46 ರೂಗೆ ಏರಿಕೆ
ಹೊಮೊಜಿನೈಸ್ಡ್ ಸ್ಟ್ಯಾಂಡಡೈಸ್ಡರ್ ಹಾಲು 44 ರೂ ರಿಂದ 47 ರೂಗೆ ಏರಿಕೆ
ಸಮೃದ್ಧಿ ಹಾಲು 48 ರೂ ರಿಂದ 51 ರೂಗೆ ಏರಿಕೆ
ಸಂತೃಪ್ತಿ ಹಾಲು 50 ರೂ ರಿಂದ 53 ರೂಗೆ ಏರಿಕೆ
ಡಬಲ್ ಟೋನ್ಡ್ ಹಾಲು 36 ರೂ ರಿಂದ 39 ರೂಗೆ ಏರಿಕೆ
ಮೊಸರು ಪ್ರತಿ ಕೆಜಿಗೆ 45 ರೂ ರಿಂದ 48 ರೂಗೆ ಏರಿಕೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!