Wednesday, November 30, 2022

Latest Posts

ಮಕ್ಕಳಿಂದಲೂ ಕಲಿಯೋಕೆ ಬೇಕಾದಷ್ಟಿದೆ ಸ್ವಾಮಿ, ಏನ್ ಕಲಿಯೋದು ಅಂತೀರಾ? ಇದನ್ನು ಓದಿ…

ಚಿಕ್ಕವರಿಗೆ ದೊಡ್ಡವರಿಂದ ಕಲಿಯೋಕೆ ಬೇಕಾದಷ್ಟಿದೆ, ನಮ್ಮನ್ನು ನೋಡಿ ಕಲಿಯಿರಿ ಎಂದು ಮಕ್ಕಳಿಗೆ ನೀವು ಅದೆಷ್ಟು ಬಾರಿ ಹೇಳಿರಬಹುದು. ಆದರೆ ಎಂದಾದರೂ ಯೋಚನೆ ಮಾಡಿದ್ದೀರಾ? ಮಕ್ಕಳಿಂದ ನಿಮಗೆ ಕಲಿಯೋಕೆ ಎಷ್ಟೆಲ್ಲಾ ಇದೆ ಎಂದು, ಬರುಬರುತ್ತಾ ಆ ಮುಗ್ಧತೆ ಎಲ್ಲಿಗೆ ಹೋಯ್ತು? ಮಕ್ಕಳಿಂದ ನೀವು ಕಲಿಯಬೇಕಾದ ಜೀವನ ಪಾಠಗಳು ಹೀಗಿವೆ..

ಭಾವನೆಗಳನ್ನು ಜೀವಿಸಿ, ಮಕ್ಕಳನ್ನು ನೋಡಿ ಅಳು ಬಂದರೆ ಅಳು, ನಗು ಬಂದರೆ ನಗು, ಕೋಪ ಬಂದರೆ ಕೋಪ, ಯಾವ ಭಾವನೆಗಳನ್ನಾದರೂ ಮುಚ್ಚಿಡುತ್ತಾರಾ?

smilesಅಲ್ಲಿನದ್ದು ಅಲ್ಲಿಗೇ ಬಿಟ್ಟುಬಿಡಿ, ಮಕ್ಕಳಿಗೆ ಅದನ್ನು ಮುಟ್ಟಬೇಡ ಎಂದು ಕೂಗಿ ಹೇಳಿ, ಹೆದರುತ್ತಾರೆ, ಅಳುತ್ತಾರೆ. ಹಾಗೆ ಒಂದೇ ನಿಮಿಷದಲ್ಲಿ ಬೇರೆ ಏನಾದರೂ ಮಾಡುತ್ತಾರೆ. ನೀವು ನಗಿಸಿದರೆ ಮತ್ತೆ ನಗುತ್ತಾರೆ.

Kids playing Images | Free Vectors, Stock Photos & PSDಮಕ್ಕಳಂತೆ ಸದಾ ಬ್ಯುಸಿಯಾಗಿರಿ, ಹೊಸತನ್ನು ಕಲಿಯುತ್ತಲೇ ಇರಿ. ಒಂದಿಲ್ಲಾ ಒಂದು ಕೆಲಸ ಮಾಡುತ್ತಲೇ ಇರಿ.

375,842 Kids Playing Stock Videos and Royalty-Free Footage - iStockಕಟುಕನನ್ನು ಕಂಡರೂ ಮಕ್ಕಳು ನಗುತ್ತಾರೆ, ಛೀ ಕಳ್ಳ ಎಂದು ತಮಾಷೆಯಾಗಿ ಹೇಳಿದರೆ ಸಾಕು ನೀವ್ಯಾರಾದರೇನು, ಮುದ್ದಾಗಿ ನಕ್ಕುಬಿಡುತ್ತಾರೆ. ಎಲ್ಲರಿಗೂ ಹೀಗೆ ನಗೋಕೆ ಸಾಧ್ಯವಾ?

When does a baby smile for the first time and why? | Parenting News,The  Indian Expressಎಷ್ಟು ಪ್ರಶ್ನೆ ಕೇಳ್ತಾರೆ ಮಕ್ಕಳು? ತಲೆನೋವು ಬರುವಷ್ಟು, ಅದರಿಂದ ಎಷ್ಟು ಕಲಿಯುತ್ತಾರೆ? ಸಾಗರದಷ್ಟು, ಅಲ್ವಾ? ಪ್ರಶ್ನೆ ಕೇಳಿದವ ಆ ಕ್ಷಣಕ್ಕೆ ದಡ್ಡ, ಕೇಳದವ ಯಾವಾಗಲೂ ದಡ್ಡ.

Question Baby Images – Browse 7,970 Stock Photos, Vectors, and Video |  Adobe Stockಮಕ್ಕಳಿಗೆ ಭಯವೇ ಇಲ್ಲ, ಸಿಕ್ಕ ಕಡೆ ಹಾರೋದು, ಕುಣಿಯೋದು, ಬಿದ್ದರೂ ಎದ್ದು ಮತ್ತೆ ಆಡೋಕೆ ಹೋಗೋದು, ನಾವು ಈಗಾಗಲೇ ಎಲ್ಲದಕ್ಕೂ ಭಯಪಡೋಕೆ ಆರಂಭಿಸಿದ್ದೀವಿ ಅಲ್ವಾ?

28,689 Baby Jumper Stock Photos, Pictures & Royalty-Free Images - iStockಮಕ್ಕಳ ಮುಗ್ಧತೆಗೆ ಸಾಟಿಯೇ ಇಲ್ಲ, ದೊಡ್ಡವರಾಗುತ್ತಾ ಮುಗ್ಧತೆ ಹೋಗಿಬಿಡತ್ತೆ. ಆದರೆ ಕೊಂಚವಾದ್ರೂ ಉಳಿಸಿಕೊಳ್ಳಿ.

43 Baby Smile Quotes to Brighten Your Dayಒಂದು ಬಾರಿ ಸಿಗಲಿಲ್ಲ ಎಂದು ಮಕ್ಕಳು ಸುಮ್ಮನಾಗೋದಿಲ್ಲ. ಪದೇ ಪದೆ ವಸ್ತುವನ್ನು ಹಿಡಿಯೋಕೆ ಪ್ರಯತ್ನ ಮಾಡುತ್ತಾರೆ. ಮತ್ತು ಗೆದ್ದೇ ಗೆಲ್ತಾರೆ.

32 gifts for a 6-month-old baby to help develop their mindಜೀವನ, ಪರಿಸರ ಎಲ್ಲವನ್ನು ಮಕ್ಕಳು ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಾರೆ. ನಾಯಿ ನೋಡಿ ನೀವು ಖುಷಿಪಡ್ತೀರಾ? ಮಕ್ಕಳು ಅದನ್ನೂ ನೋಡಿ ಸ್ನೇಹ ಬೆಳೆಸೋಕೆ ಪ್ರಯತ್ನ ಮಾಡ್ತಾರೆ. ಪರಿಸರವನ್ನು ಸದಾ ಪ್ರೀತಿಸಿ.

20 Fun And Simple Outdoor Activities For Babies

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!