ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಮ್ರಾನ್ ಖಾನ್ ಪಾಕಿಸ್ತಾನ ಪ್ರಧಾನಿ ದ್ದೆಯಿಂದ ಕೆಳಗಿಳಿದ ಬಳಿಕ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಲ್ಲಿದ್ದು, ಇದೀಗ ಇಮ್ರಾನ್ ಖಾನ್ ಮಹಿಳೆ ಜೊತೆ ಅಸಭ್ಯವಾಗಿ ಮಾತನಾಡುವ ಆಡಿಯೋ ಕಾಲ್ ಲೀಕ್ ಆಗಿದೆ.
ಈ ಆಡಿಯೋದಲ್ಲಿ ಇಮ್ರಾನ್ ಖಾನ್ ಈಗಲೇ ತನ್ನ ಬಳಿ ಬರುವಂತೆ ಮಹಿಳಗೆ ಬುಲಾವ್ ನೀಡಿದ್ದಾರೆ. ಇದಕ್ಕೆ ಮಹಿಳೆ ಕೂಡ ಪ್ರತಿಕ್ರಿಯೆ ನೀಡಿದ್ದು,ವೈರಲ್ ಆಗಿದೆ. ಈ ಆಡಿಯೋ ಪಾಕಿಸ್ತಾನ ಮಾತ್ರವಲ್ಲ, ವಿಶ್ವದಲ್ಲೇ ಪಾಕಿಸ್ತಾನದ ಪ್ರಧಾನಿ ಕಚೇರಿಯಲ್ಲಿ ನಡೆಯುತ್ತಿರುವ ಅಸಲಿ ಆಟಗಳನ್ನು ಬೆತ್ತಲೆ ಮಾಡಿದೆ.
ಈ ಆಡಿಯೋವನ್ನು ಪಾಕಿಸ್ತಾನದ ಪತ್ರಕರ್ತ ಲೀಕ್ ಮಾಡಿದ್ದಾರೆ. ಯೂಟ್ಯೂಬ್ ಚಾನೆಲ್ ಮೂಲಕ ಈ ಆಡಿಯೋ ಬಹಿರಂಗ ಮಾಡಲಾಗಿದೆ. ಇದೀಗ ಈ ಆಡಿಯೋ ಕ್ಲಿಪ್ ಭಾರಿ ಸಂಚಲನ ಸೃಷ್ಟಿಸಿದೆ.