ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು ಸಂತಸದಲ್ಲಿದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ಶಾಕ್ ಎದುರಾಗಿದೆ.
ಐಪಿಎಲ್ ನಿಯಮ ಉಲ್ಲಂಘನೆಯ ಅಡಿಯಲ್ಲಿ ನಿಧಾನಗತಿಯ ಓವರ್ ರೇಟ್ ಆರೋಪದಡಿ ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ
ಇದು ಈ ಸೀಸನ್ನಲ್ಲಿ ಪಾಂಡ್ಯಗೆ ವಿಧಿಸಲಾದ ಮೊದಲ ದಂಡ ಇದಾಗಿದೆ. ಹಾಗೆಯೇ ಈ ಸೀಸನ್ನಲ್ಲಿ ನಿಧಾನಗತಿಯ ಓವರ್ ರೇಟ್‌ನಿಂದ ದಂಡಕ್ಕೆ ಒಳಗಾದ ಮೂರನೇ ನಾಯಕ ಪಾಂಡ್ಯ ಆಗಿದ್ದಾರೆ.
ಇವರಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫಾಫ್ ಡು ಪ್ಲೆಸಿಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಸಂಜು ಸ್ಯಾಮ್ಸನ್ ಅವರಿಗೂ ದಂಡ ವಿಧಿಸಲಾಗಿದೆ