ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದುತಮ್ಮ ಸರಕಾರಿ ಬಂಗಲೆಯನ್ನು ತೆರವುಗೊಳಿಸಿದ್ದಾರೆ.
ದೆಹಲಿಯ 12 ತುಘಲಕ್ ಲೇನ್’ನಲ್ಲಿರುವ ತಮ್ಮ ಅಧಿಕೃತ ನಿವಾಸವನ್ನು ಖಾಲಿಗೊಳಿಸಿದರು.
ರಾಹುಲ್ ಗಾಂಧಿ ಗೆ ಬಂಗಲೆ ಖಾಲಿ ಮಾಡುವಂತೆ ಅವರಿಗೆ ನೋಟಿಸ್ ಬಂದಿತ್ತು.ಇದಕ್ಕಾಗಿ ಅವರಿಗೆ ಏಪ್ರಿಲ್ 22 ರವರೆಗೆ ಗಡುವು ನೀಡಲಾಗಿತ್ತು. ಆದ್ರೆ, ಅದಕ್ಕೂ ಮೊದ್ಲೇ ರಾಹುಲ್ ಬಂಗಲೆ ತೊರೆದ್ದಾರೆ.
ಸರ್ಕಾರ ಬಂಗಲೆ ಖಾಲಿ ಮಾಡಿದ ರಾಹುಲ್ ಗಾಂಧಿ ತಾಯಿ ಸೋನಿಯಾ ಗಾಂಧಿ ನಿವಾಸಕ್ಕೆ ಸ್ಥಳಾಂತರವಾಗಿದ್ದಾರೆ. ಶುಕ್ರವಾರ ಸಂಜೆ 12 ತುಘಲಕ್ ಲೇನ್ನಲ್ಲಿರುವ ರಾಹುಲ್ ಗಾಂಧಿ ನಿವಾಸಕ್ಕೆ ಹಲವಾರು ಟ್ರಕ್ ತಲುಪಿದ್ದು, ಅಲ್ಲಿಂದ ಅವರ ವಸ್ತುಗಳನ್ನು ಭರ್ತಿ ಮಾಡಿ ಸೋನಿಯಾ ಗಾಂಧಿ ನಿವಾಸದಲ್ಲಿ ಇಳಿಸಲಾಯಿತು.