I.N.D.I.A ಒಕ್ಕೂಟಕ್ಕೆ ಶಾಕ್: ಇನ್ಮುಂದೆ ಮೈತ್ರಿ ಇಲ್ಲ ಎಂದ ಆಮ್ ಆದ್ಮಿ ಪಾರ್ಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಲೋಕಸಭಾ ಚುನಾವಣೆ ಮುಗಿದು ಬಿಜೆಪಿ ಮಿತ್ರ ಪಕ್ಷಗಳ ನೆರವಿನಿಂದ ರಚಿಸುವ ತಯಾರಿಯಲ್ಲಿದೆ. ಇತ್ತ I.N.D.I.A ಮೈತ್ರಿ ಒಕ್ಕೂಟದಿಂದ ಆಮ್ ಆದ್ಮಿ ಪಾರ್ಟಿ ಹೊರಬಂದಿದೆ.

ಈ ಕುರಿತು ಆಪ್ ಸಚಿವ ಗೋಪಾಲ್ ರೈ ಘೋಷಣೆ ಮಾಡಿದ್ದು,2025ರ ವಿಧಾನಸಭಾ ಚುನಾವಣೆಗೆ ಆಪ್ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಯಾವುದೇ ಪಕ್ಷದ ಜೊತೆ ಮೈತ್ರಿ ಇಲ್ಲ ಎಂದಿದ್ದಾರೆ.

ಲೋಕಸಭಾ ಚುನಾವಣೆಗಾಗಿ ವಿಪಕ್ಷಗಳು ಒಗ್ಗಟ್ಟಾಗಿ ಹೋರಾಟ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಆಮ್ ಆದ್ಮಿ ಪಾರ್ಟಿ ಕೂಡ I.N.D.I.A ಮೈತ್ರಿ ಪಾಲುದಾರರಾಗಿ ಬೆಂಬಲ ನೀಡಿದೆ. I.N.D.I.A ಮೈತ್ರಿ ಲೋಕಸಭಾ ಚುನಾವಣೆಗಾಗಿ ಮಾಡಿದ ಮೈತ್ರಿ. ಲೋಕಸಭಾ ಚುನಾವಣೆ ಹೋರಾಟದ ದೃಷ್ಟಿಯಿಂದ ಆಪ್ I.N.D.I.A ಮೈತ್ರಿಗೆ ಸಂಪೂರ್ಣ ಬೆಂಬಲ ನೀಡಿ ಪಾಲುದಾರರಾಗಿತ್ತು. ಇದೀಗ ಲೋಕಸಭೆ ಚುನಾವಣೆ ಮುಗಿದಿದೆ. ಹೀಗಾಗಿ ಇನ್ನು ಆಪ್‌ಗೆ ಮೈತ್ರಿ ಅವಶ್ಯಕತೆ ಇಲ್ಲ ಎಂದು ಗೋಪಾಲ್ ರೈ ಹೇಳಿದ್ದಾರೆ.

2025ರಲ್ಲಿ ದೆಹಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ದೆಹಲಿ ಚುನಾವಣೆಗೆ ಆಪ್ ಯಾವುದೇ ಮೈತ್ರಿ ಇಲ್ಲ. ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಗೋಪಾಲ್ ರೈ ಸ್ಪಷ್ಟಪಡಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ದೆಹಲಿಯ 7 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಹಾಗೂ ಆಪ್ ಮೈತ್ರಿ ಮೂಲಕ ಸ್ಪರ್ಧಿಸಿತ್ತು. ಆದರೆ ದೆಹಲಿ 7 ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿದೆ.

ಆಮ್ ಆದ್ಮಿ ಪಾರ್ಟಿ ಈ ಚುನಾವಣೆಯಲ್ಲಿ ದೆಹಲಿ, ಪಂಜಾಬ್, ಹರ್ಯಾಣ, ಗುಜರಾತ್ ಹಾಗೂ ಅಸ್ಸಾಂನಲ್ಲಿ ಆಪ್ ಸ್ಪರ್ಧಿಸಿತ್ತು. ಒಟ್ಟು 22 ಸ್ಥಾನಗಳಲ್ಲಿ ಆಪ್ ಸ್ಪರ್ಧೆ ಮಾಡಿತ್ತು. ಆದರೆ 3 ಸ್ಥಾನ ಮಾತ್ರ ಗೆದ್ದುಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!