ಮುಂಬೈ ಇಂಡಿಯನ್ಸ್‌ ಕ್ಕೆ ಶಾಕ್: ಐಪಿಎಲ್‌ ಟೂರ್ನಿ ಯಿಂದಲೇ ಹಾರ್ದಿಕ್‌ ಪಾಂಡ್ಯ ಔಟ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್‌ 2024ರ ಆರಂಭಕ್ಕೂ ಮುನ್ನ ಐದು ಬಾರಿಯ ಐಪಿಎಲ್‌ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡ ದೊಡ್ಡ ಆಘಾತ ಎದುರಿಸಿದೆ.

ರೋಹಿತ್‌ ಶರ್ಮ ಅವರಿಂದ ತಂಡ ನಾಯಕತ್ವವನ್ನು ಪಡೆದುಕೊಂಡಿದ್ದ ಹಾರ್ದಿಕ್‌ ಪಾಂಡ್ಯ ಗಾಯದ ಕಾರಣದಿಂದಾಗಿ ಸಂಪೂರ್ಣ ಐಪಿಎಲ್‌ಗೆ ಲಭ್ಯರಾಗುವುದು ಅನುಮಾನವಾಗಿದೆ.

ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿ ಹಾಗೂ ಆ ಬಳಿಕ ನಡೆಯಲಿರುವ ಐಪಿಎಲ್‌ಗೂ ಅವರು ಅನುಮಾನ ಎಂದು ಮೂಲಗಳು ತಿಳಿಸಿವೆ.

2023ರ ವಿಶ್ವಕಪ್‌ ವೇಳೆ ಹಾರ್ದಿಕ್‌ ಪಾಂಡ್ಯ ಮೊಣಕಾಲು ಗಾಯಕ್ಕೆ ತುತ್ತಾಗಿದ್ದರು. ಇದರಿಂದಾಗಿ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆದ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿ ಹಾಗೂ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಅವರು ಅಲಭ್ಯರಾಗಿದ್ದರು.

ಜನವರಿ 11 ರಿಂದ 17ರವರೆಗೆ ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಇದು ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೂ ಮುನ್ನ ಭಾರತ ಆಡಲಿರವ ಕೊನೆಯ ಟಿ20 ಸರಣಿ ಆಗಿರಲಿದೆ. ಜೊಹಾನ್ಸ್‌ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಪಂದ್ಯವೊಂದರಲ್ಲಿ ಫೀಲ್ಡಿಂಗ್ ಮಾಡುವಾಗ ಸೂರ್ಯಕುಮಾರ್ ಯಾದವ್ ತಮ್ಮ ಕಾಲಿನ ಗಾಯಕ್ಕೆ ತುತ್ತಾಗಿದ್ದರು ಇದರಿಂದ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಗಾಯ ಕೊಂಚ ಪ್ರಮಾಣದಲ್ಲಿ ಗಂಭೀರವಾಗಿರುವ ಕಾರಣ, ಗುಣಮುಖರಾಗಲು ಆರು ವಾರ ಬೇಕಾಗಬಹುದು ಎಂದು ಹೇಳಲಾಗಿದೆ.

ಹಾರ್ದಿಕ್ ತನ್ನ ಕಾಲಿನ ಗಾಯದಿಂದ ಶೀಘ್ರದಲ್ಲೇ ಚೇತರಿಸಿಕೊಳ್ಳುವ ಸಾಧ್ಯತೆಗಳು ಕಡಿಮೆ, ಅಫ್ಘಾನಿಸ್ತಾನ ಸರಣಿಯನ್ನು ಕಳೆದುಕೊಳ್ಳುವುದು ಮಾತ್ರವಲ್ಲದೆ ಐಪಿಎಲ್ 2024ರಿಂದಲೂ ಹೊರಗುಳಿಯಬಹುದು ಎಂದು ಪಿಟಿಐ ವರದಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!