July 12, 2026
Sunday, July 12, 2026
spot_img

ಶವರ್ಮಾ-ಕಬಾಬ್ ಪ್ರಿಯರಿಗೆ ಶಾಕ್: ಬೆಂಗಳೂರಿಗರನ್ನು ಬೆಚ್ಚಿಬೀಳಿಸಿದ ಆಹಾರ ಇಲಾಖೆಯ ವರದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶವರ್ಮಾ ಮತ್ತು ಕಬಾಬ್ ಪ್ರಿಯರಿಗೆ ಆಹಾರ ಸುರಕ್ಷತಾ ಇಲಾಖೆಯ ವರದಿ ಆತಂಕ ಮೂಡಿಸಿದೆ. ನಗರದಲ್ಲಿನ ವಿವಿಧ ಹೋಟೆಲ್ ಹಾಗೂ ಆಹಾರ ಮಳಿಗೆಗಳಿಂದ ಸಂಗ್ರಹಿಸಿದ ಮಾದರಿಗಳ ಪರೀಕ್ಷೆಯಲ್ಲಿ ಕೆಲವು ಕಡೆ ಆರೋಗ್ಯಕ್ಕೆ ಹಾನಿಕಾರಕ ಅಂಶಗಳು ಪತ್ತೆಯಾಗಿವೆ.

ಶವರ್ಮಾದಲ್ಲಿ ಕೃತಕ ಬಣ್ಣದ ಬಳಕೆ

ಆಹಾರ ಸುರಕ್ಷತಾ ಅಧಿಕಾರಿಗಳು ಬೆಂಗಳೂರಿನ ಹಲವು ಪ್ರದೇಶಗಳಿಂದ ಶವರ್ಮಾ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಪರೀಕ್ಷೆಯ ಬಳಿಕ ಬಹುತೇಕ ಮಾದರಿಗಳು ಸುರಕ್ಷಿತವೆಂದು ವರದಿ ಬಂದಿದ್ದರೂ, ಎಂಟು ಮಾದರಿಗಳಲ್ಲಿ ನಿಯಮ ಉಲ್ಲಂಘನೆ ಪತ್ತೆಯಾಗಿದೆ. ಕೆಲವು ಮಳಿಗೆಗಳಲ್ಲಿ ಕೃತಕ ಬಣ್ಣಗಳನ್ನು ಬಳಸಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ:

ಕಬಾಬ್ ಮಾದರಿಗಳಲ್ಲೂ ಉಲ್ಲಂಘನೆ

ಕಬಾಬ್ ಮಾದರಿಗಳ ಪರೀಕ್ಷೆಯಲ್ಲೂ ಎರಡು ಕಡೆ ಅಸುರಕ್ಷಿತ ಅಂಶಗಳು ಪತ್ತೆಯಾಗಿವೆ. ಕಬಾಬ್ ತಯಾರಿಕೆಯಲ್ಲಿ ಬಣ್ಣ ಬಳಕೆಗೆ ನಿರ್ಬಂಧವಿದ್ದರೂ, ಕೆಲ ಮಳಿಗೆಗಳು ನಿಯಮಗಳನ್ನು ಪಾಲಿಸದೇ ಇರುವುದನ್ನು ಇಲಾಖೆ ಗುರುತಿಸಿದೆ.

ಆಹಾರ ಗುಣಮಟ್ಟದ ಮೇಲೆ ಇಲಾಖೆ ನಿಗಾ

ಈ ಹಿಂದೆ ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿಯನ್‌ನಲ್ಲಿ ಕೃತಕ ಬಣ್ಣ ಬಳಕೆಯನ್ನು ತಡೆಗಟ್ಟಿದ್ದ ಸರ್ಕಾರ, ಇದೀಗ ಜನಪ್ರಿಯ ಫಾಸ್ಟ್‌ಫುಡ್‌ಗಳ ಗುಣಮಟ್ಟದ ಮೇಲೂ ಕಟ್ಟುನಿಟ್ಟಿನ ನಿಗಾ ವಹಿಸಿದೆ. ಆಹಾರ ಸುರಕ್ಷತಾ ಇಲಾಖೆ, ಸಾರ್ವಜನಿಕರು ಸ್ವಚ್ಛತೆ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡುವ ಮಳಿಗೆಗಳಿಂದಲೇ ಆಹಾರ ಖರೀದಿಸುವಂತೆ ಸಲಹೆ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !