Friday, February 3, 2023

Latest Posts

ಕೇಜ್ರಿವಾಲ್ ಸರ್ಕಾರಕ್ಕೆ ಶಾಕ್: ಸಚಿವರ ಮೇಲಿದೆ 7 ಕೋಟಿ ರೂಪಾಯಿ ಲಂಚ ಪಡೆದ ಆರೋಪ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅರವಿಂದ್ ಕೇಜ್ರಿವಾಲ್ ಸರ್ಕಾರಕ್ಕೆ ಮತ್ತೊಂದು ತಲೆನೋವು ಎದುರಾಗಿದೆ.ಅದೇನೆಂದರೆ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಸಚಿವ ಸತ್ಯೇಂದ್ರ ಜೈನ್ ಜೈಲು ಸೇರಿದ್ದು, ಆದ್ರೂ ಇದೀಗ ಸತ್ಯೇಂದ್ರ ಜೈನ್ ಸೇರಿದಂತೆ ದಹಲಿ ಸರ್ಕಾರದ ಕೆಲ ಸಚಿವರು ಹಾಗೂ ಅಧಿಕಾರಿಗಳು ಬರೋಬ್ಬರಿ 7 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಕಂಪನಿಯೊಂದು ದೆಹಲಿ ಪೊಲೀಸರಿಗೆ ದೂರು ದಾಖಲಿಸಿದೆ.

ಸಿಸಿಟಿವಿ ಟೆಂಡರ್‌ನಲ್ಲಿ ಅತೀ ದೊಡ್ಡ ಗೋಲ್‌ಮಾಲ್ ನಡೆದಿದೆ ಎಂದು ಕಂಪನಿ ದೂರಿನಲ್ಲಿ ಆರೋಪಿಸಿದೆ.

ದೆಹಲಿಯ ಸಿಸಿಟಿವಿ ಅಳವಡಿಸುವಿಕೆ ಕುರಿತು ಖಾಸಗಿ ಕಂಪನಿಗೆ ಟೆಂಡರ್ ನೀಡಲಾಗಿತ್ತು. ಇಲ್ಲಿ ಖಾಸಗಿ ಕಂಪನಿಯ ಮಾಜಿ ಉದ್ಯೋಗಿಯ ಸಿಸಿಟಿವಿ ಅಳವಡಿಕೆ ಹಾಗೂ ನಿರ್ವಹಣೆಯಲ್ಲಿ ಕೆಲ ತಪ್ಪು ಮಾಡಿದ್ದರು. ಹೀಗಾಗಿದೆಹಲಿ ಸರ್ಕಾರದ ಇಬ್ಬರು ಸಚಿವರು ಹಾಗೂ ಅಧಿಕಾರಿಗಳು ಖಾಸಗಿ ಕಂಪನಿಗೆ ನೋಟೀಸ್ ನೀಡಿದ್ದರು. ಈ ನೋಟೀಸ್‌ನಲ್ಲಿ 16 ಕೋಟಿ ರೂಪಾಯಿ ದಂಡವಾಗಿ ಪಾವತಿಸುವಂತೆ ಸೂಚಿಸಲಾಗಿತ್ತು.

ಇದರಿಂದ ಚಿಂತೆಗೀಡಾದ ಖಾಸಗಿ ಕಂಪನಿಯ ಉನ್ನತ ಮಟ್ಟದ ಅಧಿಕಾರಿಗಳು ಸತ್ಯೇಂದ್ರ ಜೈನ್ ಹಾಗ ಮತ್ತಿಬ್ಬರು ಸಚಿವರನ್ನು ಭೇಟಿಯಾಗಿ ದಂಡ ವಿನಾಯಿತಿ ನೀಡಿ ಅಥವಾ ದಂಡ ಮೊತ್ತ ಕಡಿತಗೊಳಿಸುವಂತೆ ಮನವಿ ಮಾಡಿದ್ದಾರೆ.

ಈ ವೇಳೆ ಸತ್ಯೇಂದ್ರ ಜೈನ್ ಹಾಗೂ ಮತ್ತಿಬ್ಬರು ಸಚಿವರು 7 ಕೋಟಿ ರೂಪಾಯಿ ನೀಡಿದರೆ ಪ್ರಕರಣ ಅಂತ್ಯಹಾಡುವುದಾಗಿ ಭರವಸೆ ನೀಡಿದ್ದಾರೆ. ಇದರಂತೆ ಸಚಿವರು ಹಾಗೂ ಅಧಿಕಾರಿಗಳಿಗೆ ಒಟ್ಟು 7 ಕೋಟಿ ರೂಪಾಯಿ ಹಣವನ್ನು ಲಂಚದ ರೂಪದಲ್ಲಿ ನೀಡಿದ್ದಾರೆ. ಆದ್ರೆ ಸಚಿವರು ನೀಡಿದ ಭರವಸೆ ಪೊಳ್ಳಾಗಿದೆ. ಇತ್ತ 7 ಕೋಟಿ ರೂಪಾಯಿ ಹಣವೂ ಇಲ್ಲದಾಗಿದೆ ಎಂದು ಆರೋಪಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!