ವೀಕೆಂಡ್‌ ಮಸ್ತಿಗಾಗಿ ಊರಿಗೆ ಹೊರಟವರಿಗೆ ಶಾಕ್‌: ಖಾಸಗಿ ಬಸ್ ದರ 3 ಪಟ್ಟು ಹೆಚ್ಚಳ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಕಾವೇರಿ ಕಿಚ್ಚು ಹೆಚ್ಚಾಗಿದ್ದು, ಶುಕ್ರವಾರ ಕರ್ನಾಟಕ ಬಂದ್‌ ಮಾಡಲಾಗುತ್ತಿದೆ. ಇದರ ನಡುವೆ ಇಂದು ಸಂಜೆಯೇ ಊರಿನತ್ತ ಹೊರಟವರ ಸಂಖ್ಯೆಯೂ ಹೆಚ್ಚಾಗಿದೆ. ಈ ಹಿನ್ನೆಲೆ ಖಾಸಗಿ ಬಸ್‌ಗಳಲ್ಲಿ ಸೀಟು ಬುಕ್‌ ಮಾಡುವವರ ಸಂಖ್ಯೆ ಹೆಚ್ಚಾಗಿದ್ದ, ಬಸ್‌ ಮಾಲೀಕರು ಪ್ರಯಾಣದ ದರ ಎರಡರಿಂದ ಮೂರು ಪಟ್ಟು ಹೆಚ್ಚಳ ಮಾಡಲಾಗಿದೆ.

ಕಾವೇರಿ ನೀರಿಗಾಗಿ ಕರ್ನಾಟಕ ಬಂದ್‌ಗೆ ಕರೆ ನೀಡಿರುವುದರಿಂದ ಬಹುತೇಕ ಉದ್ಯಮಗಳು, ಕಂಪನಿಗಳು, ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳನ್ನು ಬಂದ್‌ ಮಾಡಲಾಗುತ್ತದೆ. ವಿವಿಧ ಸಂಘಟನೆಗಳಿಂದ ಬೆಂಬಲ ನೀಡಲಾಗಿದ್ದು, ಪ್ರತಿಭಟನೆಗೆ ಮುಂದಾಗಿವೆ. ಹೀಗಾಗಿ, ಶುಕ್ರವಾರ ಕರ್ನಾಟಕ ಬಂದ್‌, ಶನಿವಾರ ವೀಕೆಂಡ್‌ ರಜೆ, ಭಾನುವಾರ ಸಾಮಾನ್ಯ ರಜೆ, ಸೋಮವಾರ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಒಟ್ಟು ನಾಲ್ಕು ರಜೆಗಳು ಲಭ್ಯವಾಗಲಿವೆ. ಆದ್ದರಿಂದ ಸಾಲು ಸಾಲು ರಜೆಗಳ ಲಾಭವನ್ನು ಪಡೆಯಲು ಸಹಸ್ರಾರು ಜನರು ಊರಿನತ್ತ ಹೊರಟಿದ್ದಾರೆ. ಆದರೆ, ಖಾಸಗಿ ಬಸ್‌ ಮಾಲೀಕರು ಊರಿಗೆ ಹೊರಟವರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದ್ದಾರೆ.

ಒಂದಕ್ಕೆ 3 ಪಟ್ಟು ದರ ಹೆಚ್ಚಳ: ಬೆಂಗಳೂರು- ಮಂಗಳೂರು, ಬೆಂಗಳೂರು-ಉಡುಪಿ, ಬೆಂಗಳೂರು-ಬಳ್ಳಾರಿ, ಬೆಂಗಳೂರು-ಧರ್ಮಸ್ಥಳ ಸೇರಿದಂತೆ ಅನೇಕ ಸ್ಥಳಗಳಿಗೆ ತೆರಳಲು ಬಸ್‌ಗಳಿಗೆ ದುಬಾರಿ ದರವನ್ನು ನಿಗದಿ ಮಾಡಲಾಗಿದೆ. ಸಾಮಾನ್ಯ ದಿನಗಳಲ್ಲಿ 800 ರೂ.ಗಳಿಂದ 1,000 ರೂ. ಇರುವ ಬಸ್‌ ಪ್ರಯಾಣದ ದರವನ್ನು 3,000 ರೂ.ಗಳಿಂದ 3,500 ರೂ.ಗಳವರೆಗೆ ಹೆಚ್ಚಳ ಮಾಡಲಾಗಿದೆ. ಜೊತೆಗೆ, ಆನ್‌ಲೈನ್‌ನಲ್ಲಿ ಬುಕಿಂಗ್‌ ಮಾಡುವವರಿಗೆ ಜಿಎಸ್‌ಟಿ ಚಾರ್ಜಸ್‌ ಸೇರಿಸಿ ಮತ್ತಷ್ಟು ದುಬಾರಿ ದರವನ್ನು ವಿಧಿಸಲಾಗುತ್ತಿದೆ. ಒಟ್ಟಾರೆ, ಕರ್ನಾಟಕ ಬಂದ್ ಹಾಗೂ ಲಾಂಗ್ ವೀಕೆಂಡ್ ಮೂಡಲ್ಲಿ ಊರಿಗೆ ಹೊರಟವ್ರಿಗೆ ಶಾಕ್ ಕೊಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!