August 21, 2026
Friday, August 21, 2026
spot_img

ಎಐಎಡಿಎಂಕೆ ಪಕ್ಷಕ್ಕೆ ಗುಡ್ ಬೈ ಹೇಳಲು ಹೊರಟ ಶಾಸಕನಿಗೆ ಶಾಕ್: ರಾಜೀನಾಮೆ ಪತ್ರ ನಿರಾಕರಿಸಿದ ಸ್ಪೀಕರ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ಚುನಾವಣೆಯಲ್ಲಿ ಸೋಲಿನ ಬಳಿಕ ಎಐಎಡಿಎಂಕೆ ಪಕ್ಷವು ಎರಡು ಭಾಗವಾಗಿದ್ದು, ಈಗಾಗಲೇ ಅನೇಕ ಶಾಸಕರು ಸಿಎಂ ವಿಜಯ್ ಪಕ್ಷಕ್ಕೆ ಬೆಂಬಲ ಘೋಷಿಸಿದ್ದಾರೆ.ಇದರ ನಡುವೆ ನಿನ್ನೆ ಮೂವರು ರಾಜೀನಾಮೆ ನೀಡಿದ್ದು, ಇಂದು ಮತ್ತೋರ್ವ ಶಾಸಕ ರಾಜೀನಾಮೆ ಮುಂದಾಗಿದ್ದಾರೆ.

ಕೈಬರಹದಲ್ಲಿ ಬರೆಯಲು ಸೂಚನೆ

ಇಂದು ಅಂಬಸಮುದ್ರಂ ಕ್ಷೇತ್ರದ ಎಐಎಡಿಎಂಕೆ ಶಾಸಕ ಇಸಕ್ಕಿ ಸುಬ್ಬಯ್ಯ ಅವರು ವಿಧಾನಸಭಾ ಸ್ಪೀಕರ್ ಜೆಸಿಡಿ ಪ್ರಭಾಕರ್ ಅವರನ್ನು ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆದರೆ ರಾಜೀನಾಮೆ ಪತ್ರವನ್ನು ಟೈಪ್ ಮಾಡಿದ್ದ ಕರಣ ರಾಜೀನಾಮೆ ನಿರಾಕರಿಸಿದ ಸ್ಪೀಕರ್‌, ಪತ್ರವನ್ನು ಕೈಬರಹದಲ್ಲಿ ಬರೆದು ಸಲ್ಲಿಸುವಂತೆ ಸೂಚಿಸಿದರು.

ಇದಕ್ಕೂ ಮುನ್ನ ಸೋಮವಾರ ಮಧುರಾಂತಕಂ ಕ್ಷೇತ್ರದ ಶಾಸಕರ ಮರಗತಮ್ ಕುಮಾರವೇಲ್, ಪೆರುಂಡುರೈ ಕ್ಷೇತ್ರದ ಜಯಕುಮಾರ್ ಹಾಗೂ ಧಾರಾಪುರಂನಿಂದ ಗೆದ್ದ ಸತ್ಯಭಾಮ ಅವರು ಎಐಎಡಿಎಂಕೆ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿ ಸಚಿವ ಆಧವ್ ಅರ್ಜುನ್ ಅವರನ್ನು ಭೇಟಿಯಾಗಿದ್ದರು.

ಮೂವರ ರಾಜೀನಾಮೆ ಪತ್ರ ಅಂಗೀಕಾರ

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್‌,ನಿಯಮಗಳ ಪ್ರಕಾರ ರಾಜೀನಾಮೆಗಳು ಕ್ರಮಬದ್ಧವಾಗಿವೆ. ಧಾರಾಪುರಂ ಶಾಸಕಿ ಸತ್ಯಭಾಮ, ಮಧುರಾಂತಕಂ ಶಾಸಕಿ ಮರಗತಮ್ ಕುಮಾರವೇಲ್ ಮತ್ತು ಪೆರುಂಡುರೈ ಶಾಸಕ ಜಯಕುಮಾರ್ ಅವರು ಇಂದಿನಿಂದ ಜಾರಿಗೆ ಬರುವಂತೆ ತಮ್ಮ ವಿಧಾನಸಭಾ ಸದಸ್ಯ ಸ್ಥಾನಗಳಿಗೆ ರಾಜೀನಾಮೆ ಪತ್ರಗಳನ್ನ ಸಲ್ಲಿಸಿದ್ದಾರೆ. ಅವುಗಳನ್ನು ಅಂಗೀಕರಿಸಲಾಗಿದೆ ಎಂದು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !