ಆನ್ಲೈನ್ ಫುಡ್ ಡೆಲಿವರಿ ದೈತ್ಯರಿಗೆ ಶಾಕ್‌ ಕೊಟ್ಟ ಸಿಸಿಐ: ಜೊಮ್ಯಾಟೊ, ಸ್ವಿಗ್ಗಿ ವಿರುದ್ಧ ತನಿಖೆಗೆ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಜೊಮ್ಯಾಟೊ ಮತ್ತು ಸ್ವಿಗ್ಗಿಯ ನಡವಳಿಕೆಯ ಬಗ್ಗೆ ತನಿಖೆ ನಡೆಸಲು ಭಾರತದ ಆಂಟಿಟ್ರಸ್ಟ್ ಸಂಸ್ಥೆ ಇಂದು ಆದೇಶಿಸಿದೆ.
‘ಜೊಮ್ಯಾಟೊ ಮತ್ತು ಸ್ವಿಗ್ಗಿಯ ಕೆಲವು ನಡವಳಿಕೆಗಳಿಗೆ ಸಂಬಂಧಿಸಿದಂತೆ ಮೇಲ್ನೋಟಕ್ಕೆ ಪ್ರಕರಣ ಅಸ್ತಿತ್ವದಲ್ಲಿದೆ ಎಂದು ಆಯೋಗವು ಅಭಿಪ್ರಾಯಪಟ್ಟಿದ್ದು, ಅತಿಯಾದ ಕಮಿಷನ್‌ನಂತಹ ಆರೋಪಗಳನ್ನು ಎದುರಿಸುತ್ತಿದೆ ಹೀಗಾಗಿ ತನಿಖೆಯ ಅಗತ್ಯವಿದೆ ಎಂದು ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಆದೇಶಿಸಿದೆ.
ಹೀಗಾಗಿ ನಡವಳಿಕೆಯು ನಿಬಂಧನೆಗಳನ್ನು ಉಲ್ಲಂಘಿಸಿದೆಯೇ ಎಂದು ನಿರ್ಧರಿಸಲು ಮಹಾನಿರ್ದೇಶಕರಿಂದ (ಡಿಜಿ) ತನಿಖೆಯ ಅಗತ್ಯವಿದೆ ಎಂದು ಸಿಸಿಐ ಹೇಳಿದೆ.
ಭಾರತೀಯ ಸ್ಪರ್ಧಾತ್ಮಕ ಆಯೋಗ (CCI) ತನ್ನ ಡಿಜಿಗೆ ವಿವರವಾದ ತನಿಖೆ ನಡೆಸಿ 60 ದಿನಗಳ ಒಳಗೆ ವರದಿ ಸಲ್ಲಿಸುವಂತೆ ನಿರ್ದೇಶಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!