Saturday, June 25, 2022

Latest Posts

ತನ್ನ ಎಲ್ಲಾ ಆಸ್ತಿಯನ್ನು ರಾಹುಲ್ ಗಾಂಧಿಗೆ ಬರೆಯಲು ಮುಂದಾದ ಮಹಿಳೆ: ಕಾರಣ ಏನು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಮಳೆಯೊಬ್ಬಳು ತನ್ನ ಆಸ್ತಿಯನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೆಸರಿಗೆ ಬರೆಯಲು ಮುಂದಾಗಿದ್ದಾಳೆ.
ಹೌದು, ಡೆಹ್ರಾಡೂನ್‌ನ ನೆಹರು ಕಾಲೋನಿಯ ದಲನ್‌ವಾಲಾ ನಿವಾಸಿ ಪುಷ್ಪಾ ಮುಂಜಿಯಾಲ್ ಎಂಬ ಮಹಿಳೆ ಈ ಕುರಿತು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ರಾಹುಲ್ ಗಾಂಧಿಯವರ ಆಲೋಚನೆಗಳಿಂದ ನಾನು ಪ್ರಭಾವಿತಳಾಗಿದ್ದೇನೆ. ಹಾಗಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರನ್ನು ತಮ್ಮ ಆಸ್ತಿಯ ವಾರಸುದಾರರನ್ನಾಗಿ ಮಾಡುವಂತೆ ಕೋರಿಕೊಂಡಿದ್ದಾಳೆ.
ತನ್ನ ಆಸ್ತಿಯ ಸಂಪೂರ್ಣ ವಿವರವನ್ನು ನ್ಯಾಯಾಲಯದಲ್ಲಿ ನೀಡಿದ್ದೇನೆ ಎಂದಿರುವ ಪುಷ್ಪಾ, ತನ್ನ ಸಾವಿನ ನಂತರ ತನ್ನ ಸಂಪೂರ್ಣ ಆಸ್ತಿಯ ಮಾಲೀಕತ್ವವನ್ನು ರಾಹುಲ್ ಗಾಂಧಿಗೆ ಹಸ್ತಾಂತರಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಆಕೆ 50 ಲಕ್ಷ ರೂಪಾಯಿಗಳ ಸ್ಥಿರ ಠೇವಣಿ ಮತ್ತು 10 ಗ್ರಾಂ ಚಿನ್ನವನ್ನು ಹೊಂದಿದ್ದಾರೆ.
ಸ್ವಾತಂತ್ರ್ಯ ಬಂದಾಗಿನಿಂದಲೂ ರಾಹುಲ್ ಗಾಂಧಿ ಅವರ ಕುಟುಂಬ ದೇಶಕ್ಕಾಗಿ ಅತ್ಯುನ್ನತ ತ್ಯಾಗ ಮಾಡಿದ್ದಾರೆ ಎಂದು ಹೆಮ್ಮೆಪಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss