ಛತ್ತೀಸ್‍ಗಢದಲ್ಲಿ ಕಾಂಗ್ರೆಸ್ ನಾಯಕರಿಗೆ ಶಾಕ್ ಕೊಟ್ಟ ಇಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಛತ್ತೀಸ್‍ಗಢದಲ್ಲಿ ಜಾರಿ ನಿರ್ದೇಶನಾಲಯ (Directorate of Enforcement) ದಾಳಿ ನಡೆಸಿದೆ.

ಕಲ್ಲಿದ್ದಲು ಹಗರಣಕ್ಕೆ (Coal levy scam) ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕರು, ನಾಯಕರ ಮನೆ, ಕಚೇರಿಯ ಮೇಲೆ ದಾಳಿ ನಡೆಸಿದೆ.

ಬೆಳಗ್ಗೆಯಿಂದ 17 ಸ್ಥಳಗಳಲ್ಲಿ ಶೋಧ ಕಾರ್ಯಗಳು ನಡೆಸಲಾಗಿದೆ. ದುರ್ಗ್ ಶಾಸಕ ದೇವೇಂದ್ರ ಯಾದವ್, ಛತ್ತೀಸ್‍ಗಢದ ಕಾಂಗ್ರೆಸ್ ಖಜಾಂಚಿ ರಾಮ್‍ಗೋಪಾಲ್ ಅಗರವಾಲ್, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಅಧ್ಯಕ್ಷ ಸುಶೀಲ್ ಸನ್ನಿ ಅಗರ್‍ವಾಲ್ ಮತ್ತು ಪಕ್ಷದ ವಕ್ತಾರ ಆರ್.ಪಿ ಸಿಂಗ್ ಅವರ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.

ಇತ್ತ ಫೆ.24 ರಿಂದ ನಡೆಯಲಿರುವ ಕಾಂಗ್ರೆಸ್ ಮಹಾಧಿವೇಶನದ ಹಿನ್ನೆಲೆಯಲ್ಲಿ ಬಿಜೆಪಿ (BJP) ಹತಾಶೆಗೊಂಡು ಇಡಿಯನ್ನು ಬಳಸಿ ಕಾಂಗ್ರೆಸ್ ನಾಯಕರ ಮೇಲೆ ದಾಳಿ ನಡೆಸಿದೆ ಎಂದು ಛತ್ತಿಸ್‍ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹೇಳಿದ್ದಾರೆ.
ಛತ್ತೀಸ್‍ಗಢದ ಕಾಂಗ್ರೆಸ್‍ನ ಖಜಾಂಚಿ, ಮಾಜಿ ಉಪಾಧ್ಯಕ್ಷ ಮತ್ತು ಶಾಸಕ ಸೇರಿದಂತೆ ಅನೇಕರ ಮನೆ ಮೇಲೆ ಇಡಿ ದಾಳಿ ನಡೆಸಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಈ ವರೆಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ. ಸೂರ್ಯಕಾಂತ್ ತಿವಾರಿ ಮತ್ತವರ ಚಿಕ್ಕಪ್ಪ ಲಕ್ಷ್ಮೀಕಾಂತ್ ತಿವಾರಿ, ಅಡಳಿತ ಸೇವೆಯ ಅಧಿಕಾರಿ ಸಮೀರ್ ವಿಷ್ಣೋಯ್, ಮತ್ತು ಉದ್ಯಮಿ ಸುನಿಲ್ ಅಗರ್‍ವಾಲ್ ಹಾಗೂ ಇನ್ನಿತರರನ್ನು ಬಂಧಿಸಲಾಗಿದೆ.

ಕಲ್ಲಿದ್ದಲು ಅಕ್ರಮ ತೆರಿಗೆಯಲ್ಲಿ 52 ಕೋಟಿ ರೂ.ಗಳು ಕಾಂಗ್ರೆಸ್‍ನ (Congress) ಹಿರಿಯ ನಾಯಕರಿಗೆ ಹಾಗೂ ನಾಲ್ಕು ಕೋಟಿ ರೂ.ಗಳು ಕೆಲವು ಶಾಸಕರಿಗೆ ಹಂಚಿಕೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!