Saturday, April 1, 2023

Latest Posts

ಶಿಂಧೆ ಬಣಕ್ಕೆ ಹೆಸರು- ಚಿಹ್ನೆ: ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಉದ್ದವ್ ಠಾಕ್ರೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಚುನಾವಣಾ ಆಯೋಗವು ಶಿವಸೇನೆ (Shiv Sena) ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಸಿಎಂ ಏಕನಾಥ ಶಿಂಧೆ (Eknath Shinde) ಬಣಕ್ಕೆ ನೀಡಿದ ಆದೇಶ ಪ್ರಶ್ನಿಸಿ ಮಾಜಿ ಸಿಎಂ ಉದ್ದವ್ ಠಾಕ್ರೆ (Uddhav Thackeray) ಬಣ ಸುಪ್ರೀಂಕೋರ್ಟ್ (Supreme Court) ಮೆಟ್ಟಿಲೇರಿದ್ದು, ತುರ್ತು ವಿಚಾರಣೆಗೆ ಮನವಿ ಮಾಡಿದ್ದಾರೆ.

ಉದ್ದವ್ ಠಾಕ್ರೆ ಪರ ವಕೀಲರು ಇಂದು ಸಿಜೆಐ ಡಿ.ವೈ ಚಂದ್ರಚೂಡ್ ಪೀಠದ ಮುಂದೆ ಅರ್ಜಿ ಪ್ರಸ್ತಾಪ ಮಾಡಿದರು. ಆಯೋಗದ ನಿರ್ಧಾರದ ಸರಿ ಇಲ್ಲ. ಈ ಬಗ್ಗೆ ತುರ್ತು ವಿಚಾರಣೆಯ ಅಗತ್ಯ ಇದೆ ಎಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ ಈ ಬಗ್ಗೆ ಮಂಗಳವಾರ ವಿಚಾರಣೆ ನಡೆಸುವುದಾಗಿ ಹೇಳಿದೆ.

ಇದಕ್ಕೂ ಮುನ್ನ ಕೇವಿಯೇಟ್ (Caveat) ಸಲ್ಲಿಸಿರುವ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ವಕೀಲರು ತಮ್ಮ ವಾದವನ್ನು ಕೇಳದೇ ಪ್ರಕರಣದಲ್ಲಿ ಯಾವುದೇ ಮಧ್ಯಂತರ ಆದೇಶ ನೀಡದಂತೆ ಮನವಿ ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!