ಹೊಸದಿಗಂತ ವರದಿ, ಮಂಗಳೂರು:
ರಾಜ್ಯದಲ್ಲಿ ಡೆಂಗ್ಯೂ ಜ್ವರದ ಆತಂಕದ ನಡುವೆ ಕಾಲರ ರೋಗ ಭೀತಿ ಶುರುವಾಗಿದ್ದು, ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಈದುವಿನ 36 ವರ್ಷದ ವ್ಯಕ್ತಿಯೊಬ್ಬರಲ್ಲಿ ಕಾಲರಾ ಪತ್ತೆಯಾಗಿದ್ದು, ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಪರಿಶೀಲನೆ ಮಾಡಲು ಜಿಲ್ಲಾ ಆರೋಗ್ಯ ಅಧಿಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿಗಳು ಈದುವಿಗೆ ಭೇಟಿ ನೀಡಿದ್ದಾರೆ.
ಈದು ಗ್ರಾಮದ ಚಾಲಕನೋರ್ವ ಮಂಗಳೂರು ಸೇರಿದಂತೆ ವಿವಿದೆಡೆ ಸಂಚರಿಸಿ ಆಹಾರ ಸೇವನೆ ಮಾಡುತಿದ್ದು, ಸ್ಥಳೀಯ ಕಾರ್ಯಕ್ರಮದಲ್ಲಿಯು ಆಹಾರ ಸೇವಿಸಿದ್ದ, ಆದರೆ ಜ್ವರ ಉಲ್ಬಣಗೊಂಡ ಸನ್ನಿವೇಶವನ್ನುದಲ್ಲಿ ಕಾರ್ಕಳದ ಖಾಸಗಿ ಅಸ್ಪತ್ರೆಗೆ ದಾಖಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ರೋಗ 3 ಮಂದಿಗೆ ತಗುಲಿದೆ ಎನ್ನಲಾಗಿದ್ದು, ಇವರಆರೋಗ್ಯ ಸಹಜ ಸ್ಥಿತಿಗೆ ಬಂದಿದೆ. ಇವರಲ್ಲಿ ಒಬ್ಬರ ಪರಿಸ್ಥಿತಿ ಗಂಭೀರವಾಗಿದ್ದು, ಅವರಿಗೆ ಉಡುಪಿಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಕಾಲರ ರೋಗವು ವೈಬ್ರಿಯೋ ಕಾಲರ ಎನ್ನುವ ಬ್ಯಾಕ್ಟೀರಿಯಾಗಳಿಂದ ಹರಡುವ ರೋಗವಾಗಿದೆ. ಸಾಂಕ್ರಾಮಿಕ ವಾಗಿ ಮಾನವನ ದೇಹದ ಸಣ್ಣ ಕರುಳಿಗೆ ಆಗುವ ಸೋಂಕು. ಕಾಲರ ರೋಗವು ಮೊದಲು ರಷ್ಯಾ ದೇಶದಲ್ಲಿ ಸುಮಾರು 1817 ರಲ್ಲಿ ಪತ್ತೆಯಾಗಿತ್ತು. ಬಳಿಕ ಯೂರೋಪಿನ ಅಮೇರಿಕಾ ಬಳಿಕ ವಿಶ್ವದಾದ್ಯಂತ ಹರಡಿ ಲಕ್ಷಾಂತರ ಜನರ ಮೃತಪಟ್ಟಿದ್ದರು.
ಕೊಳೆತ ತಿಂಡಿ ಪದಾರ್ಥಗಳು, ಕೊಳೆತ ನೀರು, ನೈರ್ಮಲ್ಯವಿಲ್ಲದ ಸ್ಥಳಗಳಲ್ಲಿ ಹೆಚ್ಚಾಗಿ ಕಂಡುಬರುವ ರೋಗವಾಗಿದೆ.
ಕಾಲರ ರೋಗದಿಂದ ತೀವ್ರ ನಿರ್ಜಲೀಕರಣ ಹಾಗೂ ವಾಂತಿ ಭೇದಿ ಅಸ್ವಸ್ಥತೆ ಕಿರಿಕಿರಿ, ಆಯಾಸ, ಗುಳಿಬಿದ್ದ ಕಣ್ಣುಗಳು, ಒಣ ಬಾಯಿ, ವಿಪರೀತ ಬಾಯಾರಿಕೆ, ಒಣ ಮತ್ತು ಸುಕ್ಕುಗಟ್ಟಿದ ಚರ್ಮ,ಸ್ನಾಯು ಸೆಳೆತ., ಸ್ವಲ್ಪ ಅಥವಾ ಮೂತ್ರ ವಿಸರ್ಜನೆ, ಕಡಿಮೆ ರಕ್ತದೊತ್ತಡ ಮತ್ತು ಅನಿಯಮಿತ ಹೃದಯ ಬಡಿತ. ತೀವ್ರ ನಿರ್ಜಲೀಕರಣ ಸಮಯದಲ್ಲಿ ಕೆಲವೆ ಗಂಟೆಗಳಲ್ಲಿ ಸಾವು ಸಂಭವಿಸುತ್ತದೆ.
ಕಾಲರ ರೋಗ ಸೋಂಕಿತ ವ್ಯಕ್ತಿ ಉಪಯೋಗಿಸಿದ ಬೆಡ್ ಹಾಸಿಗೆಗಳನ್ನು ಸರಿಯಾಗಿ ವಿಲೆವಾರಿ ಮಾಡಬೇಕು. ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬರುವ ಎಲ್ಲಾ ವಸ್ತುಗಳನ್ನು ಬಿಸಿ ನೀರಿನಲ್ಲಿ, ಕ್ಲೋರಿನ್ ಬ್ಲೀಚಿಂಗ್‌ನ ಜೊತೆ ತೊಳೆಯುವುದರಿಂದ ಕ್ರಿಮಿ ಶುದ್ಧೀಕರಿಸಬಹುದು. ಕಲಾರ ರೋಗಿಯ ಅಥವಾ ಅವರ ಬಟ್ಟೆ, ಹಾಸಿಗೆ ಇತ್ಯಾದಿಯನ್ನು ಮುಟ್ಟಿದ ಕೈಗಳನ್ನು ಸ್ವಚ್ಛವಾಗಿ ಕ್ಲೋರಿನ್ಯುಕ್ತ ನೀರು ಅಥವಾ ಉಪಯುಕ್ತ ಸೂಕ್ಷ್ಮಜೀವಿ ವಿರೋಧಿಯುಕ್ತ ನೀರಿನಲ್ಲಿ ತೊಳೆಯುವುದು ಅತ್ಯವಶ್ಯಕ ವಾಗಿದೆ.