ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್‌ನ ವಡೋದರಾದ ಕೊಯಾಲಿ ಪ್ರದೇಶದಲ್ಲಿ ಐಒಸಿಎಲ್‌ನ ಸಂಸ್ಕರಣಾಗಾರದಲ್ಲಿ ಸೋಮವಾರ ಸ್ಫೋಟ ಸಂಭವಿಸಿದೆ.
ರಿಫೈನರಿಯ ಶೇಖರಣಾ ತೊಟ್ಟಿಯಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ನಂತರ ಕಿಲೋಮೀಟರ್ ದೂರದವರೆಗೂ ಹೊಗೆಯ ಮೋಡ, ಸಂಸ್ಕರಣಾಗಾರದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ.
ಬೆಂಕಿಯನ್ನು ನಂದಿಸಲು 10 ಅಗ್ನಿಶಾಮಕ ವಾಹನಗಳೊಂದಿಗೆ ಧಾವಿಸಿದೆ. ಸ್ಫೋಟ ಮತ್ತು ನಂತರದಲ್ಲಿ ಬೃಹತ್ ಬೆಂಕಿಯು ಸುತ್ತಮುತ್ತಲಿನ ಕಂಪನಿಗಳು ಮತ್ತು ಪ್ರದೇಶಗಳಲ್ಲಿ ಆತಂಕ ಸೃಷ್ಟಿಸಿದೆ. ಬೆಂಕಿಯ ನಂತರ ಸಂಸ್ಕರಣಾಗಾರದಲ್ಲಿದ್ದ ಕಾರ್ಮಿಕರನ್ನು ಸ್ಥಳಾಂತರಿಸಲಾಗಿದ್ದು, ಬೆಂಕಿ ನಂದಿಸಲು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.