ಹೊಸದಿಗಂತ ವರದಿ, ವಿಜಯಪುರ:
ಗ್ಯಾರಂಟಿ ಭಾಗ್ಯಗಳನ್ನು ನಿಲ್ಲಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಸಲಹೆ ನೀಡಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾಗ್ಯಗಳನ್ನು ನಿಲ್ಲಿಸಿ ದೇವಸ್ಥಾನ, ಮಸೀದಿ, ಚರ್ಚ್ ಆಸ್ತಿ ಹೋಗಿದ್ದರೆ ಪರಿಹಾರ ಕೊಡುವ ಕಾನೂನು ತರಬೇಕು. ಶಾಸಕ ಯತ್ನಾಳರು ಬಸವ ಭಕ್ತರು ಕೂಡಿಸುವ ಕೆಲಸ ಮಾಡಿಸಬೇಕು, ಆದರೆ ಒಡೆಯುವ ಕೆಲಸ ಮಾಡಬಾರದು. ಬಸವಣ್ಣನಿಗೆ ಅಪಚಾರ ಮಾಡಿದ್ದಾರೆ, ಸಮಾಜಗಳ ಮಧ್ಯೆದಲ್ಲಿ ಬಿರುಕು ಮಾಡಿದ್ದಾರೆ ಎಂದರು.
ರೈತರ ಹೆಸರಲ್ಲಿ ಪಹಣಿಯಿದ್ದರೆ ಯಾರೂ ಕಿತ್ತುಕೊಳ್ಳಲು ಆಗಲ್ಲ, ಭೂ ಸುಧಾರಣೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ನೋಟಿಸ್ ಕೊಟ್ಟಿದ್ದರು.ಕಾಂಗ್ರೆಸ್ ಸರ್ಕಾರ ಗಾಬರಿ ಬಿದ್ದು ಎಲ್ಲ ನೋಟಿಸ್ ವಾಪಸ್ ಪಡೆದುಕೊಂಡಿದೆ, ಕಾಂಗ್ರೆಸ್- ಬಿಜೆಪಿ ಜಗಳ ಸಾಬರನ್ನು ಯಾಕೆ ಒತ್ತೆ ಇಡುತ್ತೀರಿ ಎಂದು ದೂರಿದರು.
ವಕ್ಫ್ ಬೋರ್ಡ್ ಸುಧಾರಿಸಿ, ರಾಜಕಾರಣದಿಂದ ವಕ್ಫ್ , ಮುಜರಾಯಿಗಳನ್ನು ಹೊರತಾಗಿರಬೇಕು. ನಾನು ವಕ್ಫ್ ಆಸ್ತಿ ಪಡೆದಿದ್ದರ ಬಗ್ಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಜನರ ಮುಂದೆ ದಾಖಲೆ ಇಡಬೇಕು, ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ಎದುರಿಸಬೇಕಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.