ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಕಲೈಕುಂಡ ವಾಯುನೆಲೆಯಲ್ಲಿ ತರಬೇತಿಯ ಸಮಯದಲ್ಲಿ ಫೈಟರ್ ಜೆಟ್ ಮಂಗಳವಾರ ಡಯಾಸಾ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ.
ವರದಿಗಳ ಪ್ರಕಾರ, ವಾಯುಪಡೆಯ ಪೈಲಟ್ ಪ್ಯಾರಾಚೂಟ್ ಮೂಲಕ ಅಪಘಾತದಿಂದ ಬದುಕುಳಿದಿದ್ದಾರೆ ಎನ್ನಲಾಗ್ತಿದೆ.
ಮಧ್ಯಾಹ್ನ 3:35 ರ ಸುಮಾರಿಗೆ ಯುದ್ಧ ವಿಮಾನವು ಭತ್ತದ ಗದ್ದೆಯಲ್ಲಿ ಬಿದ್ದಿತು. ವಿಮಾನ ಅಪಘಾತಕ್ಕೀಡಾದಾಗ ಈ ಪ್ರದೇಶದಲ್ಲಿ ಭೀತಿಯ ವಾತಾವರಣ ಕಂಡುಬಂದಿದೆ.