September 22, 2026
Tuesday, September 22, 2026
spot_img

ಕುಶಾಲನಗರದಲ್ಲಿ ಬೆಚ್ಚಿಬೀಳಿಸುವ ಘಟನೆ: ಹಣ-ಚಿನ್ನಕ್ಕಾಗಿ ವೃದ್ದೆಯ ಕೊ*ಲೆ: ನಂಬಿಕಸ್ಥನಿಂದಲೇ ಕೃತ್ಯ?

ಹೊಸದಿಗಂತ ವರದಿ ಕುಶಾಲನಗರ:

ವೃದ್ದೆಯನ್ನು ಕೊಂದು ಆಕೆಯ ಬಳಿಯಿದ್ದ ಹಣ‌ ಮತ್ತು ಚಿನ್ನ ದೋಚಿದ ಪ್ರಕರಣ ಕುಶಾಲನಗರ ಸಮೀಪದ ಕೂಡಿಗೆಯಲ್ಲಿ ನಡೆದಿದೆ.

ಕೂಡಿಗೆಯ ಪೂರ್ಣಚಂದ್ರ ಬಡಾವಣೆ ನಿವಾಸಿ ರತ್ನ (77) ಕೊಲೆಯಾದ ಮಹಿಳೆ.  ಶನಿವಾರದಿಂದ ಕಾಣೆಯಾಗಿದ್ದ ವೃದ್ದೆಯ ಮೃತದೇಹ ಬೈಲುಕೊಪ್ಪ-ಟಿಬೇಟ್ ಕ್ಯಾಂಪ್’ನಲ್ಲಿ ನಡೆಯುತ್ತಿರುವ ನೂತನ ಹೆದ್ದಾರಿ ಬದಿಯ ಜೋಳದ ಹೊಲದಲ್ಲಿ ಸೋಮವಾರ ಪತ್ತೆಯಾಗಿದೆ. ಈಕೆಯ ‌ಪರಿಚಿತ ಆಟೋ ಚಾಲಕ ಕೂಡಿಗೆಯ ಕುಮಾರ ಮತ್ತು ಆತನ ಸಹಚರರು ಈ ಕೃತ್ಯ ಎಸಗಿರುವುದಾಗಿ ಹೇಳಲಾಗಿದೆ.

ಅತ್ಯಂತ ನಂಬಿಕಸ್ಥನಾಗಿದ್ದ ಆಟೋ ಚಾಲಕ ವೃದ್ದೆಯ ಲೇವಾದೇವಿ ವ್ಯವಹಾರದ ಬಗ್ಗೆ ಚೆನ್ನಾಗಿ ಅರಿತಿದ್ದ. ಬೇರೊಬ್ಬರಿಗೆ ಹಣ ಕೊಡಿಸುವ ನೆಪದಲ್ಲಿ ಆಟೋದಲ್ಲಿ ಕರೆದೊಯ್ದು ಟಿಬೆಟ್ ಕ್ಯಾಂಪ್ ನಲ್ಲಿ ಹತ್ಯೆ‌ ಮಾಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:

ಈಗಾಗಲೇ ಆರೋಪಿಯನ್ನು‌ ಪೊಲೀಸರು ಬಂಧಿಸಿ ಇತರರ ಪಾತ್ರದ ಬಗ್ಗೆ ತನಿಖೆ ಮುಂದುವರೆಸಿದ್ದಾರೆ. ಮಗಳ ಮನೆಯಲ್ಲಿ ವಾಸವಾಗಿದ್ದ ಮಹಿಳೆ, ಹೊರಗೆ ತೆರಳಲು ಆಟೋ ಚಾಲಕನನ್ನು ಹೆಚ್ಚು ಅವಲಂಬಿತರಾಗಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಆಟೋ ಚಾಲಕ ಮಹಿಳೆ ಬಳಿ‌ ಹಣ, ಚಿನ್ನ ದೋಚುವ ಉದ್ದೇಶದಿಂದ ಕೃತ್ಯ ಎಸಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !