October 12, 2026
Monday, October 12, 2026
spot_img

ರಾಜ್ಯದಲ್ಲಿ ಆಘಾತಕಾರಿ ಘಟನೆ: ಮನೆಯಲ್ಲಿ ನೇಣುಬಿಗಿದುಕೊಂಡು ತಾಯಿ-ಮಗ ಆತ್ಮಹತ್ಯೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತಾಯಿ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದು ಮಗನೂ ಆತ್ಮಹತ್ಯೆಗೆ ಶರಣಾಗಿರುವ ಧಾರುಣ ಘಟನೆ ಶಿವಮೊಗ್ಗದ ಅಶ್ವತ್ಥ್ ಬಡಾವಣೆಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ.

ತಾಯಿ ಜಯಶ್ರೀ(57) ಮತ್ತು ಮಗ ಆಕಾಶ್(32) ಮೃತರು. ಇಬ್ಬರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಭೇಟಿ ನೀಡಿದ ವಿನೋಬನಗರ ಠಾಣಾ ಪೊಲೀಸರು ಮನೆ ಪರಿಶೀಲನೆ ಮಾಡಿದ್ದಾರೆ.

ಮೃತ ಡಾ. ಜಯಶ್ರೀ ಶಿವಮೊಗ್ಗದಲ್ಲಿ ತಾಯಿ ಮತ್ತು ಪ್ರಸೂತಿ ಆಸ್ಪತ್ರೆ ಹೊಂದಿದ್ದರು. ನಿನ್ನೆ ರಾತ್ರಿ ತಾಯಿ ಮತ್ತು ಮಗನ ಮಧ್ಯೆ ಜಗಳವಾಗಿದೆ. ಬಳಿಕ ಮಗ ಹಾಗೂ ಸೊಸೆ ಹೆಸರಿಗೆ ಆಸ್ತಿ ಬರೆದಿಟ್ಟು ಡಾ. ಜಯಶ್ರೀ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಡೆತ್​​ನೋಟ್ ಬರೆದಿಟ್ಟು ತಾಯಿ ಮೊದಲು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳಿಕ ಮಗ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಳೆದ ಮೂರು ವರ್ಷದ ಹಿಂದೆಯಷ್ಟೇ ಮೃತ ಆಕಾಶ್​​ನ ಮೊದಲನೇ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಿಂದ ಆಘಾತಕ್ಕೆ ಒಳಗಾಗಿದ್ದ.

ಆಘಾತದಿಂದ ಹೊರಬರಲು ಕಳೆದ ಮೇ ತಿಂಗಳಲ್ಲಿ ಆಕಾಶ್​ ಮತ್ತೊಂದು ಮದುವೆಯಾಗಿ ಆರು ತಿಂಗಳಾಗಿತ್ತು. ಹೀಗಿರುವಾಗ ತಾಯಿ ಮಗ ಆತ್ಮಹತ್ಯೆಗೆ ಶರಣಾಗಿದ್ದಾರೆ. ಎರಡನೇ ಪತ್ನಿ ಮನೆಯಲ್ಲಿರುವಾಗಲೇ ಆಕಾಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

Must Read