Wednesday, August 10, 2022

Latest Posts

SHOCKING NEWS | ಕಾರ್ಖಾನೆಯಲ್ಲಿ ಭಾರೀ ಸ್ಫೋಟ: 8 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

ಹೊಸದಿಗಂತ ವರದಿ, ಹುಬ್ಬಳ್ಳಿ:

ಇಲ್ಲಿಯ ತಾರಿಹಾಳ ಇಂಡಸ್ಟ್ರಿಯಲ್ ಏರಿಯಾದಲ್ಲಿ ಸ್ಪಾರ್ಕ್ (ಮೇಣದಬತ್ತಿ) ಫ್ಯಾಕ್ಟರಿಗೆ ಬೆಂಕಿ ತಗುಲಿದ ಪರಿಣಾಮ ಒಳಗಿದ್ದ ೮ ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದೆ.
ಚನ್ನವ್ವ (42), ಪ್ರೇಮಾ (20), ಮಾಳೇಶ (27), ನನ್ನಿಮಾ (35), ವಿಜಯಲಕ್ಷ್ಮಿ (34), ಮಲ್ಲಿಕ್ ರೆಹಾನ್ (18), ನಿರ್ಮಲಾ (29), ಗೌರವ್ವ (45) ಗಾಯಗೊಂಡವರನ್ನು ಚಿಕಿತ್ಸೆಗೆ ನಗರದ ಕಿಮ್ಸ್ ಆಸ್ಪತ್ರೆ ರವಾಣಿಸಲಾಗಿದೆ.

ಏಕಾಏಕಿ ಸ್ಪೋಟ್ ವಾದ ಪರಿಣಾಮ ಬೆಂಕಿ ಹೊತ್ತಿ ಉರಿದ ಹಿನ್ನೆಲೆ ಅವಘಡವಾಗಿದೆ. ಕಾರ್ಖಾನೆ ಅನೇಕ ಕಾರ್ಮಿಕರು ಒಳಗಡೆ ಸಿಲುಕಿದ್ದರು‌. ಅಗ್ನಿ ಅವಘಾಡವಾದ ಬಳಿಕ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.‌ ನಂತರ ಆಗ್ನಿ ಶಾಮಕ ದಳದವರು ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸುವ ಮೂಲಕ ಕಾರ್ಮಿಕರ ರಕ್ಷಣೆ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಹು- ಧಾ ಪೊಲೀಸ್ ಆಯುಕ್ತ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss