SHOCKING NEWS | ಶಿವಮೊಗ್ಗದಲ್ಲಿ ರಸ್ತೆಬದಿ ನಿಲ್ಲಿಸಿದ್ದ ಕಾರಿನಲ್ಲಿ ಮೊಬೈಲ್‌ ಸ್ಫೋಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಿವಮೊಗ್ಗದಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಕಾರಿನಲ್ಲಿ ಮೊಬೈಲ್​ ಸ್ಫೋಟಗೊಂಡಿರುವ ಘಟನೆ ಸೋಮವಾರ ನಡೆದಿದೆ.

ನಗರದ ದುರ್ಗಿಗುಡಿ ಸರ್ಕಾರಿ ಶಾಲೆ ಬಳಿ ಸ್ಫೋಟ ಸಂಭವಿಸಿದೆ. ರಿಪ್ಪನ್​ ಪೇಟೆ ಮೂಲದ ಕೃಷ್ಣ ಎಂಬುವವರು ರೋಗಿಯೊಬ್ಬರನ್ನು ನೋಡಲು ರಸ್ತೆ ಬದಿ ಕಾರು ನಿಲ್ಲಿಸಿ ಸರ್ಜಿ ಆಸ್ಪತ್ರೆಗೆ ಹೋಗಿದ್ದರು. ಈ ವೇಳೆ ಡ್ರೈವರ್​ ಸೀಟ್​ ಹಿಂಬದಿ ಕವರ್​ನಲ್ಲಿ ಇಟ್ಟಿದ್ದ ಮೊಬೈಲ್ ಸ್ಫೋಟಿಸಿದೆ.​

ಅವಘಡದಲ್ಲಿ ಸೀಟಿಗೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಸ್ಥಳೀಯರು ನೋಡಿ ಬೆಂಕಿ ನಂದಿಸಿದ್ದಾರೆ. ಮೊಬೈಲ್ ಸ್ಪೋಟಗೊಳ್ಳಲು ಕಾರಣ ಏನೆಂಬುದು ತಿಳಿದು ಬಂದಿಲ್ಲ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!