ಮುಂದೊಂದು ದಿನ ಭಾರತಕ್ಕೂ ಉಕ್ರೇನ್‌ ಪರಿಸ್ಥಿತಿ ಬರಬಹುದು: ರಾಹುಲ್‌ ಗಾಂಧಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಮಾಡಿದಂತೆ, ಭಾರತದ ಮೇಲೆ ಚೀನಾ ಕೂಡ ದಾಳಿ ಮಾಡುವ ಸಾಧ್ಯತೆ ಇದೆ. ಉಕ್ರೇನ್‌ ಸ್ಥಿತಿಯೇ ನಮಗೂ ಬರಬಹುದು ಎಂದು ರಾಹುಲ್‌ ಗಾಂಧಿ ಹೇಳಿಕೆ ನೀಡಿದ್ದಾರೆ.

ನಟ ಕಮಲ್‌ ಹಾಸನ್‌ ಜತೆ ಯುಟ್ಯೂಬ್‌ ಚಾನೆಲ್‌ನಲ್ಲಿ ಮಾತುಕತೆ ನಡೆಸುವಾಗ ರಾಹುಲ್‌ ಗಾಂಧಿ, ‘ರಷ್ಯಾ ಉಕ್ರೇನ್‌ಅನ್ನು ಹೇಗೆ ನೋಡುತ್ತಿದೆಯೋ, ಚೀನಾ ಕೂಡ ಭಾರತವನ್ನು ಹಾಗೆಯೇ ನೋಡುತ್ತಿದೆ. ಮುಂದೊಂದು ದಿನ ನಮಗೂ ಉಕ್ರೇನ್‌ ಸ್ಥಿತಿಯೇ ಬರಬಹುದು. ಭಾರತಕ್ಕೂ ಉಕ್ರೇನ್‌ ಪರಿಸ್ಥಿತಿಗೂ ಸಾಮ್ಯತೆ ಇದೆ’ ಎಂದು ಹೇಳಿದ್ದು, ಇದೀಗ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.

ನಿಮ್ಮ ಚುಟುವಟಿಕೆಗಳ ಮೇಲೆ ನಿಗಾ ಇರಲಿ. ಹೀಗೆಯೇ ಆದರೆ, ನಾವು ಅರುಣಾಚಲ ಪ್ರದೇಶ, ಲಡಾಕ್‌ಅನ್ನು ಪ್ರವೇಶಿಸುತ್ತೇವೆ ಎಂಬುದಾಗಿ ಚೀನಾ ಎಚ್ಚರಿಕೆ ನೀಡುತ್ತಿದೆ. ಮುಂದೊಂದು ದಿನ, ಉಕ್ರೇನ್‌ ಅನ್ನು ರಷ್ಯಾ ಪ್ರವೇಶಿಸಿದಂತೆ, ಚೀನಾ ಕೂಡ ಭಾರತವನ್ನು ಪ್ರವೇಶಿಸಬಹುದು ಎಂದಿದ್ದಾರೆ.

ಇತ್ತೀಚೆಗೆ ‘ಗಡಿಯಲ್ಲಿ ಭಾರತದ ಸೈನಿಕರು ಪೆಟ್ಟು ತ್ತಿನ್ನುತ್ತಿದ್ದಾರೆ’ ಎಂದು ರಾಹುಲ್‌ ಗಾಂಧಿ ಹೇಳಿಕೆ ನೀಡಿದ್ದು ಕೂಡ ವಿವಾದಕ್ಕೆ ಕಾರಣವಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!