ಕೇರಳದಿಂದ ಬಂತು ಶಾಕಿಂಗ್ ನ್ಯೂಸ್: ಮತ್ತೊಂದು ಮಂಕಿಪಾಕ್ಸ್​ ದೃಢ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್ ಸೋಂಕು ದೃಢಪಟ್ಟಿದೆ. ಈ ಮೂಲಕ ದೇಶದಲ್ಲಿ ಎರಡನೇ ಕೇಸ್ ಕಾಣಿಸಿಕೊಂಡಿದೆ.
ಯುಎಇಯಿಂದ ಬಂದಿದ್ದ ಕೇರಳದ ವ್ಯಕ್ತಿಯಲ್ಲಿ ಆಫ್ರಿಕಾ ವೈರಸ್​ ಮಂಕಿಪಾಕ್ಸ್​ ಪತ್ತೆಯಾದ ಬೆನ್ನಲ್ಲೇ ಇನ್ನೊಬ್ಬ ವ್ಯಕ್ತಿಗೂ ಸೋಂಕು ಕಾಣಿಸಿಕೊಂಡಿರುವುದು ದೃಢಪಟ್ಟಿದೆ.
ವಿದೇಶಕ್ಕೆ ತೆರಳಿದ್ದ ಈ ವ್ಯಕ್ತಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಮಾನ ನಿಲ್ದಾಣ ಮೂಲಕ ಕೇರಳದ ಕಣ್ಣೂರಿಗೆ ಆಗಮಿಸಿದ್ದಾನೆ. ಈ ವೇಳೆ, ನಡೆಸಿದ ಪರೀಕ್ಷೆಯಲ್ಲಿ ಮಂಕಿಪಾಕ್ಸ್​ ಗುಣಲಕ್ಷಣಗಳು ಕಂಡು ಬಂದಿವೆ.ಬಳಿಕ ಮಾದರಿಗಳನ್ನು ಸಂಗ್ರಹಿಸಿ ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ರಕ್ತ ಪರೀಕ್ಷೆ ನಡೆಸಿದಾಗ ಪಾಸಿಟಿವ್​ ಆಗಿ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇದು ದೇಶದ ಎರಡನೇ ಮಂಕಿಪಾಕ್ಸ್​ ಪ್ರಕರಣವಾಗಿದೆ. ಈ ವೈರಸ್​ ಈಗಾಗಲೇ ವಿಶ್ವದ 27 ರಾಷ್ಟ್ರಗಳಿಗೆ ವ್ಯಾಪಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!