Thursday, September 29, 2022

Latest Posts

ದಾಂಪತ್ಯ ಕಲಹ: ಪತ್ನಿ, ಪುಟ್ಟ ಮಗಳು, ಅತ್ತೆಗೆ ಚಾಕುವಿನಿಂದ ಇರಿದ ವ್ಯಕ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ 37 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿ, ಮಗಳು ಮತ್ತು ಅತ್ತೆಗೆ ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ಪೂರ್ವ ದಿಲ್ಲಿಯ ಮಯೂರ್‌ ವಿಹಾರ್‌ನಲ್ಲಿ ನಡೆಸಿದೆ.
ಆರೋಪಿ, ಗುರುಗಾಂವ್‌ನಲ್ಲಿ ತಾಂತ್ರಿಕ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಎಂಜಿನಿಯರ್ ಸಿದ್ಧಾರ್ಥ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಾಯಾಳುಗಳಾದ ಅದಿತಿ ಶರ್ಮಾ (37), ಅವರ ಎಂಟು ವರ್ಷದ ಮಗಳು ಮತ್ತು ತಾಯಿ ಮಾಯಾದೇವಿ (60) ಅವರನ್ನು ವಸುಂಧರಾ ಎನ್‌ಕ್ಲೇವ್‌ನ ಧರ್ಮಶಿಲಾ ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಉಪ ಪೊಲೀಸ್ ಕಮಿಷನರ್ (ಪೂರ್ವ) ಪ್ರಿಯಾಂಕಾ ಕಶ್ಯಪ್ ಮಾತನಾಡಿ, ಪ್ರಾಥಮಿಕವಾಗಿ ವೈವಾಹಿಕ ವೈಷಮ್ಯ ದಾಳಿಗೆ ಕಾರಣ ಎಂದು ನಂಬಲಾಗಿದೆ. ದಂಪತಿಗಳು ಸಿವಿಲ್ ಮತ್ತು ಕೌಟುಂಬಿಕ ನ್ಯಾಯಾಲಯಗಳಲ್ಲಿ ಕಾನೂನು ಹೋರಾಟದಲ್ಲಿ ತೊಡಗಿದ್ದರು. ಕಾನೂನಿನ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗುತ್ತಿದೆ ಎಂದು ಕಶ್ಯಪ್ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!