SHOCKING NEWS | ದಕ್ಷಿಣ ಕನ್ನಡ -ಕೊಡಗು ಜಿಲ್ಲೆಯ ಗಡಿಯಲ್ಲಿ ಮತ್ತೆ ಕಂಪಿಸಿದ ಭೂಮಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಮತ್ತು ಮಡಿಕೇರಿಯ ಗಡಿಭಾಗವಾದ ಕಲ್ಮಕಾರು ಪರಿಸರದಲ್ಲಿ ಭಾನುವಾರ ಸಂಜೆ 6.15ಕ್ಕೆ ದೊಡ್ಡ ಶಬ್ದದೊಂದಿಗೆ ಭೂಮಿ ಕಂಪಿಸಿರುವುದಾಗಿ ತಿಳಿದು ಬಂದಿದೆ.

ಕಲ್ಮಕಾರಿನ ಮೆಂಟೆಕಜೆ, ಗುಳಿಕ್ಕಾನ ಪ್ರದೇಶದಲ್ಲಿ ಶಬ್ದ ಹಾಗೂ ಕಂಪನದ ಅನುಭವವಾಗಿದ್ದು, ಕೊಲ್ಲಮೊಗ್ರದವರೆಗೂ ಶಬ್ದ ಕೇಳಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಕಲ್ಲುಗುಂಡಿಯ ಚಟ್ಟೆಕಲ್ಲು, ಕೊಯನಾಡಿನ ಮಂಗಳಪಾರೆ ಎಂಬಲ್ಲಿ ಸಹ ಭೂಮಿ ಕಂಪಿಸಿದೆ ಎಂದು ಅಲ್ಲಿನ ಸ್ಥಳೀಯರು ಹೇಳಿದ್ದಾರೆ.
ಕಳೆದ ಒಂದೂವರೆ ತಿಂಗಳ ಹಿಂದೆ ಸುಳ್ಯ ತಾಲೂಕಿನ ಗಡಿ ಬಾಗದಲ್ಲಿ ಕೆಲವೆಡೆ ಭೂಮಿ ಏಳೆಂಟು ಬಾರಿ ಕಂಪಿಸಿತ್ತು. ಆ ಸಂದರ್ಭದಲ್ಲಿ ಚೆಂಬು ,ಅರಂತೋಡು ಪ್ರದೇಶ ಕಂಪನದ ಕೇಂದ್ರ ಬಿಂದುವಾಗಿತ್ತು. ಇದೀಗ ಮತ್ತೆ ದಕ್ಷಿಣ ಕನ್ನಡ ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ಭೂಮಿ ಕಂಪಿಸಿದ್ದು ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!