September 6, 2026
Sunday, September 6, 2026
spot_img

ಪಾನಿಪುರಿ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಮುಂದಿನ ಸಲ ಪಾನಿಪುರಿ ತಿನ್ನೋ ಮುನ್ನ ಈ ವಿಷಯ ತಿಳ್ಕೊಳ್ಳಿ!

ಪಾನಿಪುರಿ ಹೆಸರು ಕೇಳಿದ್ರೆ ಸಾಕು, ಬಾಯಲ್ಲಿ ನೀರು ಬರೋದಂತೂ ಗ್ಯಾರಂಟಿ. ಸಂಜೆ ಆಯ್ತು ಅಂದ್ರೆ ಸಾಕು, ರೋಡ್ ಬದಿ ಇರೋ ಪಾನಿಪುರಿ ಗಾಡಿ ಮುಂದೆ ಕ್ಯೂ ನಿಲ್ಲೋದು ಅಂದ್ರೆ ಖುಷಿ. ಪಾನಿಪುರಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಚಿಕ್ಕವರಿಂದ ಹಿಡಿದು ದೊಡ್ಡವರ ವರೆಗೂ ಎಲ್ಲರೂ ಇಷ್ಟಪಟ್ಟು ತಿಂತಾರೆ.

ಆದ್ರೆ, ನೆಕ್ಸ್ಟ್ ಟೈಮ್ ನೀವು ಪಾನಿಪುರಿ ಗಾಡಿ ಹತ್ರ ಹೋದಾಗ “ಅಣ್ಣಾ, ಒಂದ್ ಪ್ಲೇಟ್ ಪಾನಿಪೂರಿ ಕೊಡಿ” ಎಂದು ಕೇಳೋ ಮುಂಚೆ, ಈ ವಿಷಯ ಸ್ವಲ್ಪ ಸರಿಯಾಗಿ ತಿಳ್ಕೊಳಿ.

ನೋಡ್ಲಿಕ್ಕೆ ಸೂಪರ್, ಆದ್ರೆ ಆರೋಗ್ಯಕ್ಕೆ?

ನಾವು ಪಾನಿಪುರಿ ಗಾಡಿ ಹತ್ರ ಹೋದಾಗ ಹೆಚ್ಚಾಗಿ ಕಾಣೋದು ಈ ರವೆ ಪೂರಿ. ಇವು ನೋಡೋಕೆ ದಪ್ಪವಾಗಿ, ತುಂಬಾ ಕ್ರಿಸ್ಪಿಯಾಗಿ, ಬಾಯಲ್ಲಿ ಇಟ್ಟರೆ ತಕ್ಷಣ ಕರಗುವಂತಿರುತ್ತವೆ. ರವೆಯನ್ನು ಸಂಸ್ಕರಿಸಿದ ಗೋಧಿಯಿಂದ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ, ಈ ಪೂರಿಗಳು ಚೆನ್ನಾಗಿ ಉಬ್ಬಿ, ಬರಲಿ ಎಂದು ಇದಕ್ಕೆ ಸ್ವಲ್ಪ ಮೈದಾ ಮತ್ತೆ ಎಣ್ಣೆ ಸೇರಿಸಿ ಕರೀತಾರೆ.

ಇದರಲ್ಲಿ ಫೈಬರ್ ತೀರಾ ಕಡಿಮೆ ಇರುತ್ತೆ. ಇದನ್ನು ತಿಂದರೆ ರಕ್ತದಲ್ಲಿ ಶೂಗರ್ ಲೆವೆಲ್ ತಕ್ಷಣ ಜಾಸ್ತಿ ಆಗುತ್ತೆ ಮತ್ತು ಹೊಟ್ಟೆಯಲ್ಲಿ ಬೇಗ ಜೀರ್ಣ ಆಗಲ್ಲ. ತೂಕ ಇಳಿಸಬೇಕು ಅನ್ಕೊಂಡಿರೋರಿಗೆ ಅಥವಾ ಶುಗರ್ ಇರೋರಿಗೆ ಇದು ಖಂಡಿತ ಒಳ್ಳೇದಲ್ಲ.

ಸಿಂಪಲ್, ಆದ್ರೆ ಹೆಲ್ದಿ!

ಇನ್ನೊಂದ್ ಕಡೆ, ಗೋಧಿ ಹಿಟ್ಟಿನಿಂದ ಮಾಡೋ ಗೋಲ್ಗಪ್ಪಾ ಇರುತ್ತೆ. ಇವು ಸೂಜಿ ಪೂರಿಗಿಂತ ಸ್ವಲ್ಪ ತೆಳುವಾಗಿರುತ್ತವೆ ಮತ್ತು ಬಣ್ಣ ಕೂಡ ಸ್ವಲ್ಪ ಡಾರ್ಕ್ ಆಗಿರುತ್ತೆ. ಗೋಧಿ ಹಿಟ್ಟಿನಲ್ಲಿ ನೈಸರ್ಗಿಕವಾಗಿಯೇ ಫೈಬರ್, ವಿಟಮಿನ್ ಮತ್ತು ಮಿನರಲ್ಸ್ ಜಾಸ್ತಿ ಇರುತ್ತೆ.

ಆಟಾ ಪೂರಿ ಜೀರ್ಣವಾಗೋಕೆ ಸ್ವಲ್ಪ ಟೈಮ್ ತಗೊಳ್ಳುತ್ತೆ, ಹಾಗಾಗಿ ನಿಮ್ಮ ಹೊಟ್ಟೆ ಬೇಗ ತುಂಬಿದಂತಾಗುತ್ತೆ ಮತ್ತು ಶೂಗರ್ ಲೆವೆಲ್ ಏಕಾಏಕಿ ಜಾಸ್ತಿ ಆಗಲ್ಲ. ಸೂಜಿ ಪೂರಿಗೆ ಹೋಲಿಸಿದ್ರೆ ಆಟಾ ಪೂರಿ ಕಡಿಮೆ ಎಣ್ಣೆಯನ್ನು ಹೀರಿಕೊಳ್ಳುತ್ತದೆ.

ಪಾನಿಪುರಿ ಪ್ರಿಯರಿಗೆ ಹೆಲ್ದಿ ಟಿಪ್ಸ್

ಪಾನಿಪುರಿ , ಗೋಲ್ಗಪ್ಪಾ ಏನೇ ಆಗಿರಲಿ, ಅದನ್ನು ಎಣ್ಣೆಯಲ್ಲಿ ಕರಿದೇ ಮಾಡೋದು. ನೀವು ಆಟಾ ಪೂರಿ ತಿಂದರೂ ಕೂಡ ಅದರಲ್ಲಿ ಕರಿದ ಎಣ್ಣೆಯ ಕ್ಯಾಲೋರಿಗಳು ಇದ್ದೇ ಇರುತ್ತವೆ. ಹಾಗಾಗಿ ಆಟಾ ಪೂರಿ ರವೆಗಿಂತ ‘ಆರೋಗ್ಯಕರ’ ಅನಿಸಿಕೊಂಡರೂ, ಅದನ್ನ ‘ಹೆಲ್ತ್ ಫುಡ್’ ಎಂದು ದಿನಾ ತಿನ್ನೋಕೆ ಆಗಲ್ಲ.

ಆದಷ್ಟು ಗೋಧಿ ಹಿಟ್ಟಿನ ಪೂರಿಯನ್ನೇ ಕೇಳಿ ತಿನ್ನಿ. ಪೂರಿ ಒಳಗಡೆ ಬರಿ ಆಲೂಗಡ್ಡೆ ತುಂಬಿಸಿಕೊಳ್ಳುವ ಬದಲು, ಬೇಯಿಸಿದ ಹೆಸರುಕಾಳು ಅಥವಾ ಕಡಲೆಕಾಳು ಹಾಕಿಸಿಕೊಂಡು ತಿನ್ನಿ. ಪ್ರೋಟೀನ್ ಸಿಗುತ್ತೆ.

ಸಿಹಿ ಪಾನಿಯಲ್ಲಿ ಸಕ್ಕರೆ ಜಾಸ್ತಿ ಇರುತ್ತೆ, ಹಾಗಾಗಿ ಖಾರ ಅಥವಾ ಪುದೀನಾ ಪಾನಿಯನ್ನೇ ಜಾಸ್ತಿ ಪ್ರಿಫರ್ ಮಾಡಿ.

ಮುಂದಿನ ಸಲ ಪಾನಿಪುರಿ ತಿನ್ನೋಕೆ ಹೋದಾಗ, ಬರಿ ರುಚಿ ಅಷ್ಟೇ ಅಲ್ಲ, ನಿಮ್ಮ ಹೊಟ್ಟೆಯ ಆರೋಗ್ಯದ ಬಗ್ಗೆಯೂ ಸ್ವಲ್ಪ ಯೋಚನೆ ಮಾಡಿ. ಪಾನಿಪುರಿ ತಿನ್ನೋದು ತಪ್ಪಲ್ಲ, ಆದ್ರೆ ಸರಿಯಾದ್ದನ್ನು ಆಯ್ದುಕೊಂಡು ಹಿತಮಿತವಾಗಿ ತಿಂದ್ರೆ ಆರೋಗ್ಯವೂ ಸೇಫ್, ನಾಲಿಗೆಗೂ ರುಚಿ ಪಕ್ಕಾ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !