SHOCKING NEWS | ಅಫ್ಘಾನಿಸ್ತಾನದ ಸುರಂಗದೊಳಗೆ ತೈಲ ಟ್ಯಾಂಕ್ ಸ್ಫೋಟ: 12ಕ್ಕೂ ಹೆಚ್ಚು ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಫ್ಘಾನಿಸ್ತಾನದ ಪರ್ವಾನ್ ಪ್ರಾಂತ್ಯದ ಸುರಂಗದೊಳಗೆ ತೈಲ ಟ್ಯಾಂಕರ್ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ 12ಕ್ಕೂ ಹೆಚ್ಚು ಮಂದಿ ಸಜೀವದಹನವಾಗಿರುವ ದಾರುಣ ಘಟನೆ ನಡೆದಿದೆ.
ಸಲಾಂಗ್ ಸುರಂಗದೊಳಗೆ ಭೀಕರ ಸ್ಫೋಟ ಸಂಭವಿಸಿದ್ದು, ಇದರ ಪರಿಣಾಮ ಬೆಂಕಿ ಹೊತ್ತಿಕೊಂಡು 12ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರೆ, ಇನ್ನು ಹಲವು ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪ್ರಾಂತೀಯ ಆಡಳಿತದ ವಕ್ತಾರ ಹಿಕ್ಮತುಲ್ಲಾ ಶಮೀಮ್ ಕ್ಸಿನ್ಹುವಾಗೆ ತಿಳಿಸಿದರು.
ಈ ಘಟನೆಯಿಂದ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ಉತ್ತರದ ಎಂಟು ಪ್ರಾಂತ್ಯಗಳೊಂದಿಗೆ ಸಂಪರ್ಕಿಸುವ 3,000 ಮೀಟರ್ ಎತ್ತರದ ಸಲಾಂಗ್ ಸುರಂಗವು ಸಂಚಾರಕ್ಕೆ ಅಡ್ಡಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!