SHOCKING NEWS | ತೂಗು ಸೇತುವೆ ಕುಸಿತ: ನೂರಾರು ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಗುಜರಾತ್‌ನ ಮೊರ್ಬಿ ಪ್ರದೇಶದ ಮಚ್ಚು ನದಿ ಮೇಲೆ ನಿರ್ಮಿಸಲಾಗಿದ ತೂಗು ಸೇತುವೆ ಕುಸಿದಿದೆ. ಇದರಿಂದ ಸುಮಾರು 400 ಜನರು ನದಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.

ಸೇತುವೆ ಕುಸಿದಾಗ ಸೇತುವೆ ಮೇಲೆ ಸುಮಾರು 500 ಮಂದಿ ಇದ್ದರು. ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. ವರದಿಗಳ ಪ್ರಕಾರ, ಮೊರ್ಬಿಯಲ್ಲಿ ತೂಗು ಸೇತುವೆ ಕುಸಿದಿದ್ದರಿಂದ ನೀರಿನ ಅಡಿಯಲ್ಲಿ ಸಿಲುಕಿರುವ ಭಯವಿದೆ.

ಮೊರ್ಬಿಯಲ್ಲಿ ಸಂಭವಿಸಿದ ದುರ್ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಮತ್ತು ಇತರ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ರಕ್ಷಣಾ ಕಾರ್ಯಾಚರಣೆಗಾಗಿ ತಂಡಗಳ ತುರ್ತು ಸಜ್ಜುಗೊಳಿಸುವಂತೆ ಅವರು ಕೋರಿದ್ದಾರೆ.

ಪರಿಸ್ಥಿತಿಯನ್ನು ನಿಕಟವಾಗಿ ಮತ್ತು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಪೀಡಿತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವಂತೆ ಪ್ರಧಾನಿ ಮೋದಿ ಅವರುಕೇಳಿಕೊಂಡಿದ್ದಾರೆ ಎಂದು ಪ್ರಧಾನಿಯವರ ಕಚೇರಿ ಹೇಳಿದೆ.

ದುರಸ್ತಿ ಮತ್ತು ನವೀಕರಣದ ನಂತರ ಸೇತುವೆಯನ್ನು ಅಕ್ಟೋಬರ್ 26 ರಂದು ಗುಜರಾತಿ ಹೊಸ ವರ್ಷದ ಸಂದರ್ಭದಲ್ಲಿ ತೆರೆಯಲಾಗಿತ್ತು ವರದಿಗಳ ಪ್ರಕಾರ, ಸರ್ಕಾರಿ ಟೆಂಡರ್ ಅನ್ನು ಓಧವ್ಜಿ ಪಟೇಲ್ ಒಡೆತನದ ಒರೆವಾ ಗ್ರೂಪ್ಗೆ ನೀಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!