Tuesday, August 16, 2022

Latest Posts

SHOCKING | ನೇತ್ರಾವತಿಯಲ್ಲಿ ಈಜಲು ಹೋದವರು ನೀರುಪಾಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಸಜೀಪ ಪಡು ಗ್ರಾಮದ ತಲೆಮೊಗರು ಎಂಬಲ್ಲಿ ನೇತ್ರಾವತಿ ನದಿಗೆ ಈಜಾಡಲೆಂದು ತೆರಳಿದ ಐವರ ಬಾಲಕರಲ್ಲಿ ಒರ್ವ ನೀರು ಪಾಲಾದರೆ, ನಾಲ್ವರನ್ನು ಸ್ಥಳೀಯರು ರಕ್ಷಿಸಿದ್ದು, ಈ ಪೈಕಿ ಒರ್ವನನ್ನು ಇನ್ನೋರ್ವ ಆಸ್ಪತ್ರೆಗೆ ದಾಖಲಾಗಿದೆ.
ತಲೆಮೊಗರು ನಿವಾಸಿ ರುಕ್ಮಯ ಅವರ ಮಗ ಅಶ್ವಿತ್ (19) ನೀರು ಪಾಲಾದ ಯುವಕನಾಗಿದ್ದು, ಸ್ಥಳೀಯ ಈಜುಗಾರರ ಸಹಕಾರದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಹುಡುಕಾಟ ಮುಂದುವರಿದಿದ್ದು, ರಾತ್ರಿಯಾದರೂ ಪತ್ತೆಯಾಗಿಲ್ಲ. ರಕ್ಷಿಸಲ್ಪಟ್ಟ ನಾಲ್ವರ ಪೈಕಿ
ಹರ್ಷ ಎಂಬಾತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾನುವಾರ ಸಂಜೆಯ ಹೊತ್ತಿಗೆ ವಿಶಾಲ್ , ವಿಕಾಸ್ ,ಲಿಖಿತ್ ,ಹರ್ಷ ಜೊತೆ ಅಶ್ವಿತ್ ನದಿಯಲ್ಲಿ ಈಜಾಡಲೆಂದು ತೆರಳಿದ ವೇಳೆ ಅಶ್ವಿತ್ ಮತ್ತು ಹರ್ಷ ನೀರುಪಾಲಾಗಿದ್ದಾರೆ. ಜತೆಯಲ್ಲಿದ್ದ ಯುವಕರು ಹರ್ಷನನ್ನ ರಕ್ಷಿಸಿದ್ದರೆ, ಅಶ್ವಿತ್ ಗಾಗಿ ಹುಡುಕಾಟ ಸಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss