SHOCKING VIDEO| ಸ್ಪೋಟಗೊಂಡ ನೀರಿನ ಪೈಪ್‌ಲೈನ್: ಮಹಿಳೆ ಸಾವು, 30 ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಅಸ್ಸಾಂನ ಗುವಾಹಟಿಯಲ್ಲಿ ಮುನ್ಸಿಪಲ್ ನೀರು ಸರಬರಾಜು ಪೈಪ್‌ಲೈನ್ ಸ್ಪೋಟಗೊಂಡ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿ, 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗುವಾಹಟಿಯ ಖಾರ್ಗುಲಿ ಪ್ರದೇಶದಲ್ಲಿ ನೀರಿನ ಒತ್ತಡದಿಂದಾಗಿ ಸುಮಾರು 40 ಮನೆಗಳಿಗೆ ಹಾನಿಯಾಗಿದೆ. ಏಕಾಏಕಿ ಪೈಪ್‌ಲೈನ್ ಒಡೆದು ಅಪಾರ ಪ್ರಮಾಣದ ನೀರು ಹರಿದು ಬಂದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೈಪ್‌ಗಳು ಒಡೆದ ಪರಿಣಾಮ ನೀರು ಧಾರಾಕಾರವಾಗಿ ಹರಿದು ಆ ಪ್ರದೇಶ ಜಲಾವೃತವಾಗಿದೆ. ಮಹಿಳೆಯೊಬ್ಬರು ರಸ್ತೆಯಲ್ಲಿನ ನೀರಿನ ಹರಿವಿಗೆ ಕೊಚ್ಚಿಹೋಗಿ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನೀರಿನಲ್ಲಿ ನೂರಾರು ವಾಹನಗಳು ಕೊಚ್ಚಿ ಹೋಗಿವೆ. ಈ ಘಟನೆಯಲ್ಲಿ 600 ಕ್ಕೂ ಹೆಚ್ಚು ಜನರ ಮೇಲೆ ಪ್ರಭಾವ ಬೀರಿದೆ. ಘಟನೆ ನಡೆದ ಕೆಲವೇ ಹೊತ್ತಿನಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ಥಳೀಯರಿಗೆ ಸಹಾಯ ಮಾಡಿದರು.

ಘಟನೆಯಲ್ಲಿ ಮೃತಪಟ್ಟ ಮಹಿಳೆಯನ್ನು ಸುಮಿತ್ರಾ ರಾಭಾ ಎಂದು ಪೊಲೀಸರು ಗುರುತಿಸಿದ್ದಾರೆ. ಮನೆ, ವಾಹನಗಳಿಗೆ ಹಾನಿಯಾದ ಸಂತ್ರಸ್ತರು ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಮತ್ತೊಂದೆಡೆ, ಗುಹಾವಟಿ ಮಹಾನಗರ ಅಭಿವೃದ್ಧಿ ಪ್ರಾಧಿಕಾರ (ಜಿಎಂಡಿಎ) ಆದಷ್ಟು ಬೇಗ ನೀರು ಸರಬರಾಜು ಮಾಡುವ ಭರವಸೆ ನೀಡಿದೆ.

https://twitter.com/i/status/1661827582894153728

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!