Sunday, June 4, 2023

Latest Posts

SHOCKING VIDEO| ನಡೆದು ಹೋಗುತ್ತಿದ್ದ ವ್ಯಕ್ತಿಗೆ ಬಡಿದ ಸಿಡಿಲು: ಸ್ಥಳದಲ್ಲೇ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಳೆ ಬಂದಾಗ ಎಚ್ಚರದಿಂದಿರಿ. ಹೊರಗೆ ಮತ್ತು ಮರಗಳ ಕೆಳಗೆ ಇರಬೇಡಿ ಎಂದು ಸದಾ ಜನ ಹೇಳುತ್ತಲೇ ಇರುತ್ತಾರೆ. ಸಿಡಿಲು ಯಾವಾಗ ಮತ್ತು ಎಲ್ಲಿ ಬಡಿಯುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಆದ್ದರಿಂದ, ಜಾಗರೂಕರಾಗಿರಿ. ಸಿಡಿಲು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಚಂದ್ರಾಪುರ ಜಿಲ್ಲೆಯ ಭದ್ರಾವತಿ ತಾಲೂಕಿನ ಮಜ್ರಿ ಪ್ರದೇಶದಲ್ಲಿನ ಪಶ್ಚಿಮ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುವ ಕಾರ್ಮಿಕರೊಬ್ಬರು ಕೆಲಸದ ಸ್ಥಳದಿಂದ ದೂರ ಹೋಗುತ್ತಾರೆ. ಪ್ರಕಾಶಮಾನವಾದ ಮಿಂಚು, ಸಿಡಿಲು ಅವನ ಮೇಲೆ ಬಿದ್ದಿದೆ ಅಷ್ಟೇ..ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಇದೆಲ್ಲ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಡಿಲು ನೇರವಾಗಿ ವ್ಯಕ್ತಿಯ ಮೇಲೆ ಬಡಿಯುವ ದೃಶ್ಯ ಭಯ ಹುಟ್ಟಿಸುತ್ತದೆ. ಈ ವಿಡಿಯೋ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ.

ಮೃತರನ್ನು ಬಿಹಾರ ಮೂಲದ ಬಾಬುಧನ್ ಯಾದವ್ ಎಂದು ಗುರುತಿಸಲಾಗಿದೆ. ಸಿಡಿಲು ಬಡಿದ ಪ್ರದೇಶ ಸಂಪೂರ್ಣ ಸುಟ್ಟು ಕರಕಲಾಗಿದೆ. ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಮೊದಲೇ ತಿಳಿದಿದ್ದರೆ ಹೊರಗೆ ಹೋಗದಿರುವುದು ಉತ್ತಮ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!