ಹೊಸದಿಗಂತ ಡಿಜಿಟಲ್ ಡೆಸ್ಕ್ :
ಅಮೆರಿಕದ ಕ್ಯಾಲಿಫೋರ್ನಿಯಾದ ಮಾಂಟೆರಿ ಪಾರ್ಕ್‌ನಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ 09 ಮಂದಿ ಸಾವನ್ನಪ್ಪಿದ್ದು, ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
ಮಾಂಟೆರಿ ಪಾರ್ಕ್ ನಲ್ಲಿ ರಾತ್ರಿ 10 ಗಂಟೆಯ ನಂತರ ಗುಂಡಿನ ದಾಳಿ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪ್ರತಿದಾಳಿ ನಡೆಸಿದ್ದರು.
ಘಟನೆಯ ಕುರಿತಾದ ವಿಡಿಯೋಗಳು ಸಾಮಾಜಿಕ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ .
ಎರಡು ದಿನಗಳ ಮಾಂಟೆರಿ ಪಾರ್ಕ್ ಹೊಸ ವರ್ಷದ ಉತ್ಸವಕ್ಕಾಗಿ ಹತ್ತಾರು ಸಾವಿರ ಜನರು ಶನಿವಾರ ಮಧ್ಯಾಹ್ನ ಜಮಾಯಿಸಿದ್ದರು ಎಂದು ತಿಳಿದು ಬಂದಿದೆ.