ಹೊಸದಿಗಂತ ವರದಿ,ವಿಜಯಪುರ:
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂದಗಿ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಜಿಲ್ಲೆಯ ಸಿಂದಗಿ ತಾಲೂಕಿನ ಬಂದಾಳ ಗ್ರಾಮದ ಪ್ರಶಾಂತ ಶರಣಪ್ಪ ಬಿರಾದಾರ ಹಾಗೂ ಗೊಲ್ಲಾಳಪ್ಪ ಉರ್ಫ್ ಮುದಕಪ್ಪ ಶರಣಪ್ಪ ಮಾದರ ಎಂಬ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಶಾಂತ ಬಿರಾದಾರ ಪಿಸ್ತೂಲ್ ಅನುಮತಿ ಹೊಂದಿದ್ದು, ಮೊದಲು ಪ್ರಶಾಂತ್ ಬಿರಾದಾರ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಬಳಿಕ ಅದೇ ಪಿಸ್ತೂಲ್ ನಿಂದ ಗೊಲ್ಲಾಳಪ್ಪ ಉರ್ಫ್ ಮುದುಕಪ್ಪ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ.
ಗೊಲ್ಲಾಳಪ್ಪ ಉರ್ಫ್ ಮುದುಕಪ್ಪ ಗಾಳಿಯಲ್ಲಿ ಗುಂಡು ಹಾರಿಸುವ ವಿಡಿಯೋ ಮೊಬೈಲನಲ್ಲಿ ಸೆರೆಯಾಗಿದ್ದು, ಸದ್ಯ ಈ ವಿಡಿಯೋ ವೈರಲ್ ಆಗಿದೆ.
ಕಳೆದ ಸೆ. 14 ರಂದು ರಾತ್ರಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಈ ಘಟನೆ ನಡೆದಿದೆ.