Friday, December 9, 2022

Latest Posts

ಗುಂಡಿನ ದಾಳಿಗೆ ತತ್ತರಿಸಿದ ವರ್ಜೀನಿಯಾ: ವಾಲ್‌ಮಾರ್ಟ್ ಅಂಗಡಿಯಲ್ಲಿ 10 ಮಂದಿ ಬಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಮೆರಿಕದ ವರ್ಜೀನಿಯಾದಲ್ಲಿ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ 10 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಮಂಗಳವಾರ ಸ್ಥಳೀಯ ಕಾಲಮಾನ ರಾತ್ರಿ 10:12 ರ ಸುಮಾರಿಗೆ ಚೆಸಾಪೀಕ್‌ನಲ್ಲಿರುವ ವಾಲ್‌ಮಾರ್ಟ್ ಅಂಗಡಿಯಲ್ಲಿ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಮನಬಂದಂತೆ ಗುಂಡು ಹಾರಿಸಿ ಹಲವರ ಸಾವಿಗೆ ಕಾರಣನಾದ ದುಷ್ಕರ್ಮಿಯನ್ನು ಹತ್ಯೆ ಮಾಡಲಾಗಿದೆ ಎಂದು ಚೆಸಾಪೀಕ್ ಪೊಲೀಸ್ ಇಲಾಖೆಯ ವಕ್ತಾರ ಲಿಯೊ ಕೊಸಿನಿಸ್ಕಿ ಹೇಳಿದ್ದಾರೆ. ದಾಳಿಕೋರರು ಸುಮಾರು ಅರ್ಧ ಗಂಟೆಗಳ ಕಾಲ ಗುಂಡು ಹಾರಿಸಿದ್ದು, ಈ ಗುಂಡಿನ ದಾಳಿಯಲ್ಲಿ 10 ಕ್ಕಿಂತ ಹೆಚ್ಚು ಜನರು ಸಾವನ್ನಪ್ಪಿಲ್ಲ ಎಂದು ತಿಳಿಸಿದರು.

ವರ್ಜೀನಿಯಾ ರಾಜ್ಯದ ಸೆನೆಟರ್ ಲೂಯಿಸ್ ಲ್ಯೂಕಾಸ್ ಮಾತನಾಡಿ, ವರ್ಜೀನಿಯಾದ ಚೆಸಾಪೀಕ್‌ನಲ್ಲಿರುವ ವಾಲ್-ಮಾರ್ಟ್‌ನಲ್ಲಿ ಬಂದೂಕುಧಾರಿ ಗುಂಡಿನ ದಾಳಿಯಿಂದ ಆಘಾತವಾಗಿದೆ. “ನಮ್ಮ ದೇಶದಲ್ಲಿ ಹಲವಾರು ಜೀವಗಳನ್ನು ಬಲಿ ಪಡೆದಿರುವ ಬಂದೂಕು ಹಿಂಸಾಚಾರದ ಈ ಸಾಂಕ್ರಾಮಿಕವನ್ನು ಕೊನೆಗೊಳಿಸಲು ನಾವು ಪರಿಹಾರಗಳನ್ನು ಕಂಡುಕೊಳ್ಳುವವರೆಗೆ ನಾನು ವಿಶ್ರಾಂತಿ ಪಡೆಯುವುದಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

DailyMail.com ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಶೂಟರ್ ವಾಲ್‌ಮಾರ್ಟ್ ಸ್ಟೋರ್ ಮ್ಯಾನೇಜರ್ ಎಂದು ಹೇಳಿದ್ದಾರೆ. ಮ್ಯಾನೇಜರ್ ಬ್ರೇಕ್ ರೂಮ್‌ಗೆ ಪ್ರವೇಶಿಸಿ ಇತರ ಅಂಗಡಿಯ ನೌಕರರ ಮೇಲೆ ಗುಂಡು ಹಾರಿಸಿದ್ದಾಗಿ ಸ್ಥಳೀಯರು ತಿಳಿಸಿದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!