ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲಿನ ಗುಂಡಿನ ದಾಳಿ: ಇಂಗ್ಲೆಂಡ್- ಪಾಕ್ ಮೊದಲ ಪಂದ್ಯ ಸ್ಥಳಾಂತರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಇಂಗ್ಲೆಂಡ್‌ ತಂಡದ ಪಾಕಿಸ್ತಾನ ಪ್ರವಾಸ ಹೊರಟಿದ್ದು, ಡಿಸೆಂಬರ್ 1 ರಿಂದ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವೆ 3 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ.
ಈಗಾಗಲೇ ನಿಗದಿಯಂತೆ ಈ ಸರಣಿಯ ಮೊದಲ ಪಂದ್ಯ ರಾವಲ್ಪಿಂಡಿಯಿಂದ ಆರಂಭವಾಗಬೇಕಿತ್ತು. ಆದರೆ ಈಗ ಮೊದಲ ಟೆಸ್ಟ್ ಪಂದ್ಯವನ್ನು ಸ್ಥಳಾಂತರ ಮಾಡಲಾಗಿದೆ ಎಂಬ ವರದಿ ಇದೆ.

ರಾವಲ್ಪಿಂಡಿಯಲ್ಲಿ ರಾಜಕೀಯ ತಾಪಮಾನ ಹೆಚ್ಚಿದ್ದು, ಈ ಹಿನ್ನೆಲೆಯಲ್ಲಿ ಪಿಸಿಬಿ (PCB) ಈಗ ಕರಾಚಿಯನ್ನು ಮೊದಲ ಟೆಸ್ಟ್ ಪಂದ್ಯದ ವೇದಿಕೆಯನ್ನಾಗಿ ನೋಡುತ್ತಿದೆ.

ಇನ್ನು ಇಂಗ್ಲೆಂಡ್‌ನ ಪಾಕಿಸ್ತಾನ ಪ್ರವಾಸದಲ್ಲಿ ಈಗಾಗಲೇ ನಿಗದಿತ ವೇಳಾಪಟ್ಟಿಯ ಪ್ರಕಾರ, 3 ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯ ರಾವಲ್ಪಿಂಡಿಯಲ್ಲಿ, ಎರಡನೇ ಪಂದ್ಯ ಮುಲ್ತಾನ್‌ನಲ್ಲಿ ಮತ್ತು ಮೂರನೇ ಪಂದ್ಯ ಕರಾಚಿಯಲ್ಲಿ ನಡೆಯಬೇಕಿತ್ತು. ಆದರೆ, ಈಗ ಮೊದಲ ಪಂದ್ಯ ಕರಾಚಿಯಲ್ಲಿ ನಡೆಯುವ ಸಾಧ್ಯತೆಗಳಿವೆ. ಇದರರ್ಥ ಕರಾಚಿ, ಟೆಸ್ಟ್ ಸರಣಿಯ ಮೊದಲ ಮತ್ತು ಮೂರನೇ ಪಂದ್ಯಗಳಿಗೆ ಮತ್ತೊಮ್ಮೆ ಆತಿಥ್ಯ ವಹಿಸಲಿದೆ.

ಇನ್ನು ಸ್ಥಳ ಬದಲಾದರೂ ಟೆಸ್ಟ್ ಪಂದ್ಯದ ದಿನಾಂಕಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದು ಖಚಿತವಾಗಿದೆ. ಹಾಗೆಯೇ ಎರಡನೇ ಟೆಸ್ಟ್‌ ನಡೆಯುವ ಸ್ಥಳದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಮೊದಲಿನಂತೆ ಮುಲ್ತಾನ್‌ನಲ್ಲಿ ಎರಡನೇ ಟೆಸ್ಟ್ ನಡೆಯಲಿದೆ.
20 ವರ್ಷಗಳ ನಂತರ ಇಂಗ್ಲೆಂಡ್ ಕ್ರಿಕೆಟ್ ತಂಡ ಈ ಬಾರಿ ಕರಾಚಿಯಲ್ಲಿ ಟೆಸ್ಟ್ ಪಂದ್ಯವನ್ನು ಆಡಲಿದೆ. 2000-01ರಲ್ಲಿ ಇಂಗ್ಲೆಂಡ್ ಇಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನಾಡಿತ್ತು.

ರಾವಲ್ಪಿಂಡಿಯಿಂದ ಟೆಸ್ಟ್ ಪಂದ್ಯ ಶಿಫ್ಟಾಗಿದ್ದು ಏಕೆ?
ವಾಸ್ತವವಾಗಿ ರಾವಲ್ಪಿಂಡಿಯಲ್ಲಿ ನಡೆಯಬೇಕಾಗಿದ್ದ ಟೆಸ್ಟ್ ಪಂದ್ಯ ಸ್ಥಳಾಂತರಗೊಳ್ಳಲು ಪ್ರಮುಖ ಕಾರಣ, ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮೇಲೆ ನಡೆದ ಮಾರಣಾಂತಿಕ ದಾಳಿ. ಸುಮಾರು ಎರಡು ವಾರಗಳ ಹಿಂದೆ, ಇಮ್ರಾನ್ ಮೇಲೆ ಗುಂಡಿನ ದಾಳಿ ನಡೆದಿತ್ತು.ಆ ಘಟನೆಯಿಂದ ರಾವಲ್ಪಿಂಡಿಯಲ್ಲಿ ರಾಜಕೀಯ ಉದ್ವಿಗ್ನ ವಾತಾವರಣವಿದ್ದು, ಜನರು ಹೊಸದಾಗಿ ಚುನಾವಣೆ ನಡೆಸುವಂತೆ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!