ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮೇಲೆ ಕಳೆದ ಗುರುವಾರ ನಡೆದ ಗುಂಡಿನ ದಾಳಿಗೆ ಸಂಬಂಧಿಸಿ24 ಗಂಟೆ ಒಳಗಾಗಿ ಎಫ್‌ಐಆರ್ ದಾಖಲಿಸುವಂತೆ ಪಾಕ್ ಸುಪ್ರೀಂಕೋರ್ಟ್ ಸೋಮವಾರ ಆದೇಶಿಸಿದೆ.
ತನ್ನ ಮೇಲಿನ ಹತ್ಯೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸುತ್ತಿದ್ದು, ದೂರಿನಲ್ಲಿರುವ ಸೇನೆಯ ಜನರಲ್ ಹೆಸರನ್ನು ತೆಗೆಯುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಇಮ್ರಾನ್ ಆರೋಪಿಸಿದ್ದರು.
ಇದೀಗ ಒಂದು ವೇಳೆ ಪ್ರಕರಣ ದಾಖಲಿಸಿಕೊಳ್ಳದಿದ್ದರೆ ಕೋರ್ಟ್ ಸ್ವಯಂ ಪ್ರೇರಿತವಾಗಿ ವಿಷಯ ಕೈಗೆತ್ತಿಕೊಳ್ಳುವುದಾಗಿ ಹೇಳಿದ್ದು, ಈ ವರೆಗೆ ಪ್ರಕರಣ ದಾಖಲಿಸಿಕೊಳ್ಳದೇ ಇರುವುದಕ್ಕೆ ಕಾರಣವನ್ನು ನೀಡುವಂತೆಯೂಪಂಜಾಬ್ ಪ್ರಾಂತ್ಯದ ಐಜಿಗೆಸ್ಥ ಫೈಸಲ್ ಶಹಕರ್ ಅವರಿಗೆ ಮುಖ್ಯ ನ್ಯಾಯಾಮೂರ್ತಿ ಉಮರ್ ಅಟಾ ಬಂಡಿಯಾಲ್ ಆದೇಶಿಸಿದ್ದಾರೆ. ಅಲ್ಲದೇ ಸತ್ಯದ ಶೋಧನೆಯಲ್ಲಿ ಕೋರ್ಟ್ ತಮ್ಮ ಜೊತೆ ಇರಲಿದೆ ಎಂದೂ ಆಶ್ವಾಸನೆ ನೀಡಿದ್ದಾರೆ.
ಸುಪ್ರೀಂನ ಈ ನಡೆಯನ್ನು ಇಮ್ರಾನ್ ಖಾನ್ ಅವರು ‘ನ್ಯಾಯದತ್ತ ಮೊದಲ ಹೆಜ್ಜೆ’ ಎಂದು ಪ್ರಶಂಸಿಸಿದ್ದಾರೆ.