ಅಂಗಡಿ ಮಾಲೀಕ, ಬೀದಿ ಬದಿಯ ವ್ಯಾಪಾರಿಗಳು ಗುರುತು ಪ್ರಕಟಿಸುವುದು ಕಡ್ಡಾಯ: ಹಿಮಾಚಲ ಪ್ರದೇಶ ಸರಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಹಿಮಾಚಲ ಪ್ರದೇಶ ಸರ್ಕಾರ ಕೂಡ ಪ್ರತಿಯೊಬ್ಬ ಅಂಗಡಿ ಮಾಲೀಕ ಹಾಗೂ ಬೀದಿ ಬದಿಯ ವ್ಯಾಪಾರಿ ತಮ್ಮ ಗುರುತನ್ನು ಪ್ರಕಟಿಸುವುದನ್ನು ಕಡ್ಡಾಯಗೊಳಿಸಿದೆ.

ಲೋಕೋಪಯೋಗಿ ನಗರ ಇಲಾಖೆ ಹಾಗೂ ಪುರಸಭಾ ನಿಗಮದೊಂದಿಗೆ ಸಭೆ ನಡೆಸಿದ ಬಳಿಕ ಔಟ್ ಲೆಟ್ ಗಳ ವ್ಯಾಪಾರಿಗಳು ತಮ್ಮ ಗುರುತನ್ನು ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ, ಸಚಿವ ವಿಕ್ರಮಾದಿತ್ಯ ಸಿಂಗ್ ಹೇಳಿದ್ದಾರೆ.

ರಸ್ತೆ ಬದಿಗಳಲ್ಲಿ ಮಾರಾಟ ಮಾಡುವ ಆಹಾರದ ಶುದ್ಧತೆ ಬಗ್ಗೆ ಅನುಮಾನಗಳು ಮೂಡುತ್ತಿರುವುದರ ಬಗ್ಗೆ ಜನತೆ ತೀವ್ರ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಜನರು ಕಳವಳ, ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಉತ್ತರ ಪ್ರದೇಶ ಮಾದರಿಯ ನೀತಿಯನ್ನು ಜಾರಿಗೊಳಿಸಲು ನಾವು ನಿರ್ಧರಿಸಿದ್ದೇವೆ ಎಂದು ವಿಕ್ರಮಾದಿತ್ಯ ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಆಹಾರ ಔಟ್ ಲೆಟ್ ಗಳ ಮಾಲೀಕರು ತಮ್ಮ ಹೆಸರುಗಳನ್ನು, ಗುರುತುಗಳನ್ನು ಘೋಷಿಸುವುದನ್ನು ಕಡ್ಡಾಯವಾಗಿದೆ.

- Advertisement - Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!