August 31, 2026
Monday, August 31, 2026
spot_img

ಹುಬ್ಬಳ್ಳಿಯ ಎಲೆಕ್ಟ್ರಾನಿಕ್ ಗೋದಾಮಿನಲ್ಲಿ ಶಾಟ್೯ ಸಕ್ರ್ಯೂಟ್‌: ಹೊತ್ತಿ ಉರಿದ ಕೋಟ್ಯಾಂತರ ರೂ. ವಸ್ತುಗಳು

ಹೊಸದಿಗಂತ ವರದಿ, ಹುಬ್ಬಳ್ಳಿ:

ಇಲ್ಲಿಯ ಕುಸುಗಲ್ ರಸ್ತೆಯ ಝಡೀಕೋ‌ ಎಂಟರ್‌ ಪ್ರೈಸಸ್ ಮನೆ ಬಳಕೆಯ ಸಾಮಾನುಗಳ ಗೋದಾಮಿಗೆ ಶಾಟ್೯ ಸಕ್ರ್ಯೂಟ್‌ ನಿಂದ ಬೆಂಕಿ ತಗುಲಿ ಕೋಟ್ಯಾಂತರ ರೂಪಾಯಿಯ ವಸ್ತುಗಳು ಸುಟ್ಟಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

ಉಣಕಲ್ ಮಾಲೀಕರಾದ ರವಿ ಜೈನ್ ಎಂಬುವರಿಗೆ ಸೇರಿದ ಎಲೆಕ್ಟ್ರಾನಿಕ್ ಗೋದಾಮಾಗಿದ್ದು, ಏಕಾಏಕಿ ಬೆಂಕಿ ತಗುಲಿದೆ. ಸ್ಥಳೀಯರು ಪೊಲೀಸ್ ಹಾಗೂ ಆಗ್ನಿ ಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ‌ ಸಿಬ್ಬಂದಿ ಬೆಂಕಿ‌ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಜಾಸ್ತಿ ಬೆಂಕಿ‌ ಕಾಣಿಸಿಕೊಂಡಿದ್ದರಿಂದ ನೂರಾರು ಜನರು ಗಾಬರಿಗೊಂಡು ನೋಡುತ್ತಿದ್ದಾರೆ. ಕೋಟ್ಯಾಂತರ ರೂಪಾಯಿ ಎಲೆಕ್ಟ್ರಾನಿಕ್ ವಸ್ತುಗಳಗಳಿವೆ. ಆದರೆ ಎಷ್ಟು ನಷ್ಟವಾಗಿದೆ‌ ಎಂಬುದು ತಿಳಿದು ಬಂದಿಲ್ಲ ಎಂದು ಅಗ್ನಿ ಶಾಮಕ‌ ದಳಸ ಸಿಬ್ಬಂದಿ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !