ಹೊಸದಿಗಂತ ಡಿಜಿಟಲ್ ಡೆಸ್ಕ್:
ಇದು ವಿಶೇಷವಾದ ದಿನ, ಯಾಕೆ ಅಂತೀರಾ? ಇಂದು ಹಗಲು ಕಡಿಮೆ ಹಾಗೂ ರಾತ್ರಿ ಸಮಯ ಹೆಚ್ಚಿರುತ್ತದೆ. ಸೂರ್ಯನಿಂದ ಭೂಮಿಯು ಸಾಕಷ್ಟು ದೂರದಲ್ಲಿ ಇರುವ ದಿನ ಇದಾಗಿದ್ದು, ಗೋಳಾರ್ಧದ ಪ್ರದೇಶಗಳಲ್ಲಿ ಕಡಿಮೆ ಹಗಲು ಹಾಗೂ ದೀರ್ಘ ರಾತ್ರಿ ಸಂಭವಿಸುತ್ತದೆ.
ಪ್ರತಿ ವರ್ಷ ಡಿ.20 ರಿಂದ 26ರಲ್ಲಿ ಒಂದು ದಿನ ವಿಶೇಷವಾಗಿ ಇರುತ್ತದೆ. ಈ ವರ್ಷ ಡಿ.22 ವಿಶೇಷವಾಗಿದ್ದು, ಸೂರ್ಯನು ಭೂಮಿಯಿಂದ ಸಾಕಷ್ಟು ದೂರದಲ್ಲಿ ಇದ್ದಾರೆ. ಉತ್ತರ ಗೋಳಾರ್ಧವು ಕೇವಲ 8 ಗಂಟೆ 45 ನಿಮಿಷದ ಹಗಲನ್ನು ಹೊಂದಿದೆ.
ನಾಸಾ ಪ್ರಕಾರ ಈ ಸಮಯದಲ್ಲಿ ಭೂಮಿಯ ದಕ್ಷಿಣ ಭಾಗ ಬೇಸಿಗೆಯಿಂದ ಹಾಗೂ ಉತ್ತರ ಭಾಗ ಚಳಿಯಿಂದ ಕೂಡಿರುತ್ತದೆ. ಡಿ.22 ನಂತರ ಭಾರತ ಸೇರಿದಂತೆ ಉತ್ತರ ಗೋಳಾರ್ಧದಲ್ಲಿ ಹಗಲು ಹೆಚ್ಚಾಗುತ್ತದೆ.