ವಿಚಾರಣೆ ಎಷ್ಟು ಹೊತ್ತು ನಡೆಸಬೇಕೆಂದು ಬಿಜೆಪಿ ನಾಯಕರನ್ನು ಕೇಳಬೇಕಿತ್ತೇ?: ಪರಂ ಟಾಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಡಾ ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಚಾರಣೆಗೆ ಕರೆದಿದ್ದರು, ಸಿಎಂ ಹಾಜರಾಗಿ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ಕೇವಲ 2 ಗಂಟೆ 10 ನಿಮಿಷಗಳ ಕಾಲ ವಿಚಾರಣೆ ಹೇಗೆ ಮುಗಿಯಿತು ಎಂದು ಬಿಜೆಪಿ ನಾಯಕರು ಪ್ರಶ್ನಿಸುತ್ತಿದ್ದಾರೆ, ಅಧಿಕಾರಿಗಳು ವಿಚಾರಣೆಯನ್ನು ಎಷ್ಟು ಹೊತ್ತು ನಡೆಸಬೇಕೆಂದು ಬಿಜೆಪಿ ನಾಯಕರನ್ನು ಕೇಳಬೇಕಿತ್ತೇ? ಅಗತ್ಯಬಿದ್ದರೆ ಪುನಃ ವಿಚಾರಣೆ ನಡೆಸುತ್ತಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಟಾಂಗ್ ನೀಡಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!