ಹೆಡ್ಗೇವಾರರ ಬದಲಾಗಿ ಪಠ್ಯದಲ್ಲಿ‌ ಮಹ್ಮದ ಅಲಿ ಜಿನ್ನಾ , ಔರಂಗಜೇಬ ಹೆಸರು ಸೇರಿಸಬೇಕಿತ್ತಾ? : ಈಶ್ವರಪ್ಪ ಕುಟುಕು

ಹೊಸದಿಗಂತ ವರದಿ ಬಾಗಲಕೋಟೆ:
ದೇಶದ ಸಂಸ್ಕೃತಿ ವಿಚಾರದಲ್ಲಿ ಹೆಡ್ಗೇವಾರ್ ಮಾಡಿರುವ ಭಾಷಣದ ಒಂದಂಶವನ್ನು ಸೇರಿಸಲಾಗಿದೆ.ಪಠ್ಯದಲ್ಲಿ ಮಹಮ್ಮದ್ ಅಲಿ ಜಿನ್ನಾ ಹೆಸರು ಸೇರಿಸಬೇಕಿತ್ತಾ..?ಈಶ್ವರ ಲಿಂಗ ಒಡೆದ ಔರಂಗಜೇಬನ ಹೆಸರು ಸೇರಿಸಬೇಕಿತ್ತಾ? ಎಂದು ಬಾಗಲಕೋಟೆಯಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಆಕ್ರೋಶವಾಗಿ ಹೇಳಿದರು.
ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಪಠ್ಯದಲ್ಲಿ ಮೈಸೂರು ಹುಲಿ ಟಿಪ್ಪು ಸುಲ್ತಾನ್, ಅಲೆಗ್ಸಾಂಡರ್ ದಿ ಗ್ರೇಟ್ ಇವುಗಳನ್ನು ನಮ್ಮ ಮಕ್ಕಳು ಓದುತ್ತಿದ್ದರು.ಯಾರು ನಮ್ಮ ದೇಶವನ್ನು ಹಾಳು ಮಾಡಿದ್ದರೋ,ನಮ್ಮ ಸಂಸ್ಕೃತಿಯನ್ನು ಒಡೆದು ಪುಡಿ ಪುಡಿ ಮಾಡಿದ್ದರೋ,ಅಂಥವರ ವೈಭವೀಕರಣ ನಮ್ಮ ಪಠ್ಯದಲ್ಲಿ ಇತ್ತು ಎಂದು ತಿಳಿಸಿದರು.

೧೯೨೫ ರಲ್ಲಿ ಹಿಂದೂ ಸಮಾಜ ಒಂದು ಮಾಡುವ ಪ್ರಯತ್ನವನ್ನು ಹಡ್ಗೇವಾರ್ ಮಾಡಿದ್ದಾರೆ. ಹೆಡ್ಗೇವಾರ್ ವಿಚಾರ ಹರಡದೇ ಇದ್ದಿದ್ರೇ ಈ ದೇಶ ತುಂಡು ತುಂಡಾಗಿ ಹೋಗ್ತಿತ್ತು. ಹಿಂದುತ್ವ ಇಷ್ಟೂ ಜಾಗೃತವಾಗಿರೋವಾಗಲೇ ರಾಷ್ಟ್ರದ್ರೋಹಿಗಳು, ಭಯೋತ್ಪಾದಕರು ಆಟವಾಡುತ್ತಿದ್ದಾರೆ. ವಿಚಾರವಾದಿಗಳು ಅಂತಾ ಹೇಳಿಕೊಂಡು ತಿರುಗಾಡೋರಿಗೆ ಅದೇ ಆನಂದ ಎಂದರು.

ಟಿಪ್ಪು ಸುಲ್ತಾನ್ ಬಗ್ಗೆ ಹೇಳಿದ್ರೆ ಅದೇ ಆನಂದ.ಯಾರು ಈ ದೇಶವನ್ನು ಹಾಳು ಮಾಡಿದ್ದರೋ ಅವರದೇ ಪಠ್ಯ ಇರಬೇಕೆನ್ನುವ ಆಸೆ ಅವರದಾಗಿದೆ. ವಿಚಾರವಾದಿಗಳ ವಿಚಾರವನ್ನು ನಾವು ಇಷ್ಟು ದಿನ ವಿರೋಧ ಮಾಡಲಿಲ್ಲ.ಪಠ್ಯ ಪುಸ್ತಕ ರಚನಾ ಸಮಿತಿ ರಾಷ್ಟ್ರಭಕ್ತಿಯನ್ನು ಮಕ್ಕಳಿಗೆ ಹೇಳಿಕೊಡಲು ತೀರ್ಮಾನ ಮಾಡಿದೆ.ಹಾಗಾಗಿ ರಾಷ್ಟ್ರೀಯ ಮಹಾನ್ ಪುರುಷರ ವಿಚಾರವನ್ನು ಮುಂದುವರೆಸಲಾಗ್ತಿದೆ ತಪ್ಪೇನು? . ಭಾರತೀಯ ಸಂಸ್ಕೃತಿಯನ್ನು ಉಳಿಸಬೇಕು ಎಂದು ನಮ್ಮ ಸರ್ಕಾರ ತೀರ್ಮಾನ ಮಾಡಿದೆ.ಇದನ್ನ ಸಿದ್ದರಾಮಯ್ಯ, ಡಿಕೆಶಿ ವಿರೋಧ ಮಾಡಲ್ಲ ಅಂತ ನಾವೇನು ಅಂದುಕೊಂಡಿರಲಿಲ್ಲ ಎಂದರು.

ಸ್ವಲ್ಪ ಸ್ವಲ್ಪವಾಗಿ ಅವರು ವಿರೋಧಮಾಡುತ್ತಿದ್ದಾರೆ. ಅವರಲ್ಲಿ ಒಗ್ಗಟ್ಟಿಲ್ಲ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಇಲ್ಲವಾಗಿದ್ದಲ್ಲಿ ಇದಕ್ಕೂ ಒಂದು ಮೆರವಣಿಗೆ ಮಾಡುತ್ತಿದ್ದರು. ನಾಲ್ಕು ದಿನ ಮೇಕೆದಾಟು ಅಂತ ಹೋರಾಟ ಮಾಡಿದರು. ಆಮೇಲೆ ಹಿಜಾಬ್‌ ಹಿಡ್ಕೊಂಡ್ರು, ಇವರಿಗೆ ದೇಶ ಬೇಡವಾಗಿದೆ. ಆದರೆ ಈಗ ದೇಶದಲ್ಲಿ ಹಿಂದೂ ಸಮಾಜ, ರಾಷ್ಟ್ರಭಕ್ತಿ ಜಾಗೃತಿ ಆಗಿದೆ ಎಂದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ. ಪಿ.ಎಚ್.ಪೂಜಾರ‌ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!